HomeKarnatakaBIG NEWS: ಪ್ರಚೋದನಕಾರಿ ಭಾಷಣ ಮಾಡುವ ಮಹಾರಾಷ್ಟ್ರ ನಾಯಕರಿಗೆ ಎಚ್ಚರಿಕೆ ನೀಡಿದ ಗೃಹ ಸಚಿವರು

BIG NEWS: ಪ್ರಚೋದನಕಾರಿ ಭಾಷಣ ಮಾಡುವ ಮಹಾರಾಷ್ಟ್ರ ನಾಯಕರಿಗೆ ಎಚ್ಚರಿಕೆ ನೀಡಿದ ಗೃಹ ಸಚಿವರು

ಬೆಂಗಳೂರು: ಕನ್ನಡ ರಾಜ್ಯೋತ್ಸವ ದಿನದಂದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪುಂಡಾಟ ಮೆರೆಯುವ ಶಿವಸೇನೆ ಹಾಗೂ ಎಂಇಎಸ್ ನಾಯಕರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಪರಮೇಶ್ವರ್, ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ಎಂಇಎಸ್ ನವರು ಬೆಳಗಾವಿಗೆ ಬಂದು ಕರಾಳ ದಿನಾಚರಣೆ ನಡೆಸುತ್ತಾರೆ. ಇಂತಹ ಕೃತ್ಯವೆಸಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯೋತ್ಸವದಂದು ಬೆಳಗಾವಿಗೆ ಬಂದು ಪ್ರಚೋದನಕಾರಿ ಭಾಷಣ ಮಾಡುವ ಮಹಾರಾಷ್ಟ್ರ ನಾಯಕರು, ಶಿವಸೇನೆ, ಎಂಇಎಸ್ ನ ಯಾವುದೇ ನಾಯಕರಿರಲಿ, ಅವರ ಸ್ಥಾನಮಾನ ಏನೇ ಆಗಿರಲಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

Most Popular