HomeLatest NewsSHOCKING: ವರದಕ್ಷಿಣೆಗಾಗಿ ಮುರ್ರಾ ಎಮ್ಮೆ ಬೇಡಿಕೆ ಇಟ್ಟ ಪತಿ-ಅತ್ತೆ-ಮಾವ: ಆಸೀಡ್ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ

SHOCKING: ವರದಕ್ಷಿಣೆಗಾಗಿ ಮುರ್ರಾ ಎಮ್ಮೆ ಬೇಡಿಕೆ ಇಟ್ಟ ಪತಿ-ಅತ್ತೆ-ಮಾವ: ಆಸೀಡ್ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ

ಭೋಪಾಲ್: ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವರದಕ್ಷಿಣೆಗಾಗಿ ಮುರ್ರಾ ಎಮ್ಮೆ ಕೊಡಬೇಕೆಂದು ಪತಿ, ಅತ್ತೆ-ಮಾವ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಮಲೇಶ್ ಬಘೇಲ್ ಮೃತ ಮಹಿಳೆ. ಕಳೆದ ವರ್ಷವಷ್ಟೇ ವಿಮಲೇಶ್ ಮಾಧೋಗಂಜ್ ನಿವಾಸಿ ದಿನೇಶ್ ಬಘೇಲ್ ನನ್ನು ವಿವಾಹವಾಗಿದ್ದರು. ಪತಿಯ ಕುಟುಂಬದವರು ಪಶುಸಂಗೋಪನೆ ಮಾಡುತ್ತಿದ್ದರು. ಮದುವೆ ಬಳಿಕ ವಿಮಲೇಶ್ ಗೆ ಪತಿ ಹಾಗೂ ಅತ್ತೆ-ಮಾವ ವರದಕ್ಷಿಣೆ ಕಿರುಕುಳ ನೀಡಲಾರಂಬಿಸಿದ್ದರು. ಮುರ್ರಾ ಎಮ್ಮೆ ತಳಿಯನ್ನು ವರದಕ್ಷಿಣೆ ರೂಪದಲ್ಲಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಪ್ರತಿದಿನ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸಿಸುತ್ತಿದ್ದರು.

ಇದರಿಂದ ನೊಂದ ವಿಮಲೇಶ್ ಆಸಿಡ್ ಸೇವಿಸಿದ್ದಾಳೆ. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular