HomeBusiness10 ನಿಮಿಷ ಸಾಕು ಮೊಬೈಲ್‌ನಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಡೌನ್‌ಲೋಡ್ ಮಾಡುವ ವಿಧಾನ

10 ನಿಮಿಷ ಸಾಕು ಮೊಬೈಲ್‌ನಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಡೌನ್‌ಲೋಡ್ ಮಾಡುವ ವಿಧಾನ

ಬೆಂಗಳೂರು: ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗುಡ್ ನ್ಯೂಸ್ ಇನ್ಮುಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste & Income Certificate) ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಸಮಯ ಉಳಿಸಲು ರಾಜ್ಯ ಸರ್ಕಾರವು ಆನ್‌ಲೈನ್ ಮೂಲಕವೇ ಈ ಪತ್ರಗಳನ್ನು ಪಡೆಯುವ ಸರಳ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಕೇವಲ 5 ರಿಂದ 10 ನಿಮಿಷಗಳಲ್ಲಿ ನಿಮ್ಮ ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಬಳಸಿ ಈ ಪ್ರಮಾಣ ಪತ್ರವನ್ನು ನೀವು ಮನೆಯಲ್ಲೇ ಕುಳಿತು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸುವ ಹಂತಗಳು ಇಲ್ಲಿವೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ನಾಡಕಚೇರಿಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಲಾಗಿನ್ ಪ್ರಕ್ರಿಯೆ: ಮುಖಪುಟದಲ್ಲಿ ‘Online Application’ ಆಯ್ದುಕೊಂಡು, ‘Apply Online’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ‘Get OTP’ ಒತ್ತಿರಿ. ಮೊಬೈಲ್‌ಗೆ ಬಂದ ಓಟಿಪಿ (OTP) ನಮೂದಿಸಿ ಲಾಗಿನ್ ಆಗಿ.

ಅರ್ಜಿ ಆಯ್ಕೆ: ಲಾಗಿನ್ ಆದ ನಂತರ ‘New Request’ ಮೇಲೆ ಕ್ಲಿಕ್ ಮಾಡಿ, ಅಲ್ಲಿ ‘Caste Certificate’ ಅಥವಾ ‘Income Certificate’ ಆಯ್ಕೆಯನ್ನು ಆರಿಸಿಕೊಳ್ಳಿ.

ದಾಖಲೆಗಳ ವಿವರ: ಇಲ್ಲಿ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಆಯ್ಕೆಗಳು ಕಾಣಿಸುತ್ತವೆ. ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಂಡು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.

ಸ್ಥಳದ ವಿವರ: ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ಪಟ್ಟಿಯಿಂದ ಸರಿಯಾಗಿ ಆಯ್ಕೆ ಮಾಡಿ.

ಭಾಷೆ ಮತ್ತು ಮಾಹಿತಿ: ನಿಮಗೆ ಪ್ರಮಾಣ ಪತ್ರ ಕನ್ನಡದಲ್ಲಿ ಬೇಕಿದ್ದರೆ ಕನ್ನಡ, ಇಂಗ್ಲಿಷ್‌ನಲ್ಲಿ ಬೇಕಿದ್ದರೆ ಇಂಗ್ಲಿಷ್ ಭಾಷೆಯನ್ನು ಆರಿಸಿಕೊಳ್ಳಿ. ನಂತರ ನಿಮ್ಮ ಹೆಸರು, ತಂದೆಯ ಹೆಸರು ಮತ್ತು ನಿಮ್ಮ ಪ್ರವರ್ಗವನ್ನು (Category) ಆಧಾರ್‌ನಲ್ಲಿರುವಂತೆ ನಮೂದಿಸಿ.

ಶುಲ್ಕ ಪಾವತಿ: ಅರ್ಜಿಯ ವಿವರಗಳನ್ನು ಪೂರ್ಣಗೊಳಿಸಿದ ನಂತರ, ನಿಗದಿಪಡಿಸಿದ ಶುಲ್ಕವನ್ನು ನಿಮ್ಮ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲೇ ಪಾವತಿಸಬಹುದು.

ಡೌನ್‌ಲೋಡ್: ಹಣ ಪಾವತಿಯಾದ ತಕ್ಷಣ ನಿಮ್ಮ ಪ್ರಮಾಣ ಪತ್ರ ಸಿದ್ಧವಾಗುತ್ತದೆ. ಅಲ್ಲಿಯೇ ಇರುವ ‘Print’ ಅಥವಾ ‘Download’ ಬಟನ್ ಒತ್ತಿ ನಿಮ್ಮ ಸರ್ಟಿಫಿಕೇಟ್ ಪಡೆಯಬಹುದು

ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಬೇಕಾದ ಮುಖ್ಯ ದಾಖಲೆಗಳು :

ಒಂದು ಅರ್ಜಿ ನಮೂನೆ

ಪಡಿತರ ಚೀಟಿಯ ಪ್ರತಿ ಅಥವಾ ಮತದಾರರ ಚೀಟಿಯ ನಕಲು ಅಥವಾ ಮತದಾರರ ಪಟ್ಟಿಯಲ್ಲಿ ಹೆಸರು (ಅವುಗಳಲ್ಲಿ ಒಂದು)

ಜಾತಿ ಪಟ್ವಾರಿ/ಸರ್ಪಂಚ್ ಬಗ್ಗೆ ವರದಿ

ಆದಾಯ ವರದಿ

ನಿವಾಸ ಪುರಾವೆ

ಜಾತಿ ಮತ್ತು ಧರ್ಮ ವರದಿ

ಹಳೆಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ

ಹಾಗೂ ಶಾಲೆಯ ವರ್ಗಾವಣೆಯ ಪ್ರಮಾಣ ಪತ್ರ

ಅರ್ಜಿ ಶುಲ್ಕ:

ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ರಿನಿವಲ್ : 40/- ರೂಪಾಯಿ

ಜಾತಿ ಹಾಗೂ ಆದಾಯ ಪ್ರಮಾಣ ಪತ್ರ : 40/- ರೂಪಾಯಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular