HomeLatest Newsಟೋಲ್ ಕಟ್ಟದೇ ತಪ್ಪಿಸಿಕೊಂಡರೆ ಡಬಲ್ ದಂಡ ಅಥವಾ ವಾಹನ ಸೇವೆ ಬಂದ್ : ನಿಯಮ ಬಿಗಿಗೊಳಿಸಿದ...

ಟೋಲ್ ಕಟ್ಟದೇ ತಪ್ಪಿಸಿಕೊಂಡರೆ ಡಬಲ್ ದಂಡ ಅಥವಾ ವಾಹನ ಸೇವೆ ಬಂದ್ : ನಿಯಮ ಬಿಗಿಗೊಳಿಸಿದ ಕೇಂದ್ರ !

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಸದೆ ನುಣುಚಿಕೊಳ್ಳುವ ವಾಹನ ಸವಾರರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹ) ಎರಡನೇ ತಿದ್ದುಪಡಿ ನಿಯಮಗಳು, 2026’ ಅನ್ನು ಜಾರಿಗೆ ತಂದಿದೆ. ಹೊಸ ನಿಯಮದಂತೆ, ಟೋಲ್ ಪಾವತಿಸದ ವಾಹನ ಮಾಲೀಕರಿಗೆ ಇ-ನೋಟಿಸ್ ನೀಡಲಾಗುತ್ತಿದ್ದು, 72 ಗಂಟೆಯೊಳಗೆ ಬಾಕಿ ಪಾವತಿಸದಿದ್ದರೆ ದುಪ್ಪಟ್ಟು ದಂಡ ತೆರಬೇಕಾಗುತ್ತದೆ.

ಹೌದು.   ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಸದೆ ನುಣುಚಿಕೊಳ್ಳುವ ವಾಹನ ಸವಾರರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹ) ಎರಡನೇ ತಿದ್ದುಪಡಿ ನಿಯಮಗಳು, 2026’ ಅನ್ನು ಜಾರಿಗೆ ತಂದಿದೆ.

·ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ETC) ವ್ಯವಸ್ಥೆಯ ಮೂಲಕ ಟೋಲ್ ತಪ್ಪಿಸುವ ವಾಹನಗಳನ್ನು ಗುರುತಿಸಿ ತಕ್ಷಣವೇ ಮಾಲೀಕರಿಗೆ ಇ-ನೋಟಿಸ್ ಕಳುಹಿಸಲಾಗುತ್ತದೆ.ನೋಟಿಸ್ ಬಂದ 72 ಗಂಟೆಯೊಳಗೆ ಪಾವತಿಸಿದರೆ ಕೇವಲ ಅಸಲು ಮೊತ್ತವನ್ನು ಮಾತ್ರ ಕಟ್ಟಬಹುದು. ವಿಳಂಬವಾದರೆ ಅನ್ವಯವಾಗುವ ಶುಲ್ಕದ  ಎರಡರಷ್ಟು ದಂಡ ವಿಧಿಸಲಾಗುತ್ತದೆ. 5 ದಿನಗಳ ನಂತರವೂ ಬಾಕಿ ಉಳಿಸಿಕೊಂಡರೆ, ‘ವಾಹನ್’ ಪೋರ್ಟಲ್ ಮೂಲಕ ಆ ವಾಹನಕ್ಕೆ ಸಂಬಂಧಿಸಿದ ಸರ್ಕಾರಿ ಸೇವೆಗಳ ಮೇಲೆ ನಿರ್ಬಂಧ ಹೇರಲು ಅವಕಾಶ ಕಲ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ನಿಯಮಗಳು ಏನು ಹೇಳುತ್ತವೆ?

  • ಇ-ನೋಟಿಸ್ (e-Notice): ಟೋಲ್ ಪಾವತಿಸದ ವಾಹನಗಳ ಸಂಚಾರವು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ETC) ವ್ಯವಸ್ಥೆಯಲ್ಲಿ ದಾಖಲಾದ ತಕ್ಷಣ, ವಾಹನ ಮಾಲೀಕರಿಗೆ ಎಸ್‌ಎಂಎಸ್, ಇಮೇಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಇ-ನೋಟಿಸ್ ಕಳುಹಿಸಲಾಗುತ್ತದೆ.
  • 72 ಗಂಟೆಗಳ ಕಾಲಾವಕಾಶ: ನೋಟಿಸ್ ಬಂದ 72 ಗಂಟೆಗಳ ಒಳಗಾಗಿ ಬಾಕಿ ಇರುವ ಟೋಲ್ ಹಣವನ್ನು ಪಾವತಿಸಿದರೆ, ಯಾವುದೇ ಹೆಚ್ಚುವರಿ ದಂಡವಿಲ್ಲದೆ ಕೇವಲ ಅಸಲು ಮೊತ್ತವನ್ನು ಮಾತ್ರ ಪಾವತಿಸಬಹುದು.
  • ದುಪ್ಪಟ್ಟು ದಂಡ: ಒಂದು ವೇಳೆ 72 ಗಂಟೆಗಳ ನಂತರವೂ ಪಾವತಿ ಮಾಡದಿದ್ದರೆ, ಅನ್ವಯವಾಗುವ ಟೋಲ್ ಮೊತ್ತದ ಎರಡರಷ್ಟು (Double) ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ.
  • ವಾಹನ ಸೇವೆಗಳ ಸ್ಥಗಿತ: ಒಂದು ವೇಳೆ ಟೋಲ್ ಬಾಕಿ ಉಳಿಸಿಕೊಂಡು 15 ದಿನಗಳು ಕಳೆದರೆ, ಆ ವಾಹನದ ಮಾಹಿತಿಯನ್ನು ‘ವಾಹನ್’ (VAHAN) ಡೇಟಾಬೇಸ್‌ನಲ್ಲಿ ದಾಖಲಿಸಲಾಗುತ್ತದೆ. ಬಾಕಿ ಹಣ ಪಾವತಿಸುವವರೆಗೂ ಆ ವಾಹನಕ್ಕೆ ಸಂಬಂಧಿಸಿದ ಸರ್ಕಾರಿ ಸೇವೆಗಳ ಮೇಲೆ (ಉದಾಹರಣೆಗೆ ಎಫ್‌ಸಿ ನವೀಕರಣ, ಮಾಲೀಕತ್ವ ವರ್ಗಾವಣೆ) ನಿರ್ಬಂಧ ಹೇರಲಾಗುತ್ತದೆ.

ದೂರು ನೀಡಲು ಅವಕಾಶ:

ವಾಹನ ಮಾಲೀಕರಿಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಇ-ನೋಟಿಸ್ ಬಂದ 72 ಗಂಟೆಗಳ ಒಳಗೆ ನಿಗದಿತ ಆನ್‌ಲೈನ್ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು. ಈ ದೂರನ್ನು 5 ದಿನಗಳ ಒಳಗೆ ಇತ್ಯರ್ಥಪಡಿಸಬೇಕಾಗುತ್ತದೆ, ಇಲ್ಲದಿದ್ದರೆ ಆ ನೋಟಿಸ್ ರದ್ದಾಗುತ್ತದೆ. ತಡೆರಹಿತ (Barrier-free) ಟೋಲ್ ವ್ಯವಸ್ಥೆಯನ್ನು ಉತ್ತೇಜಿಸುವುದು, ಪಾರದರ್ಶಕತೆ ತರುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಾಲು ನಿಲ್ಲುವುದನ್ನು ತಪ್ಪಿಸುವುದು ಈ ಹೊಸ ನಿಯಮದ ಮುಖ್ಯ ಉದ್ದೇಶವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular