HomeLatest Newsದೋಸೆ ಹಾಕುವ ಮುನ್ನ ತವಾ ಮೇಲೆ ನೀರು ಯಾಕೆ ಚಿಮುಕಿಸುತ್ತಾರೆ? ಇದರ ಅಸಲಿ ಸೀಕ್ರೆಟ್ ಇಲ್ಲಿದೆ...

ದೋಸೆ ಹಾಕುವ ಮುನ್ನ ತವಾ ಮೇಲೆ ನೀರು ಯಾಕೆ ಚಿಮುಕಿಸುತ್ತಾರೆ? ಇದರ ಅಸಲಿ ಸೀಕ್ರೆಟ್ ಇಲ್ಲಿದೆ ನೋಡಿ

ಬೆಂಗಳೂರು: ಹೋಟೆಲ್‌ಗಳಲ್ಲಿ ಅಥವಾ ಮದುವೆ ಸಮಾರಂಭಗಳಲ್ಲಿ ದೋಸೆ ಮಾಸ್ಟರ್‌ಗಳು ಕೆಂಪಗೆ ಕಾದ ತವಾ ಮೇಲೆ ನೀರು ಚಿಮುಕಿಸಿ, ಚುಯ್ ಎಂಬ ಸದ್ದಿನೊಂದಿಗೆ ಬಟ್ಟೆಯಿಂದ ಒರೆಸಿ ದೋಸೆ ಹಾಕುವುದನ್ನು ನೀವು ನೋಡಿರುತ್ತೀರಿ. ನಾವೆಲ್ಲಾ ಇದು ತವಾ ತಣ್ಣಗಾಗಿಸಲು ಅಥವಾ ಸ್ವಚ್ಛ ಮಾಡಲು ಅಂದುಕೊಂಡಿರುತ್ತೇವೆ. ಆದರೆ, ಇದರ ಹಿಂದೆ ಲೈಡೆನ್‌ಫ್ರಾಸ್ಟ್ ಪರಿಣಾಮ (Leidenfrost Effect) ಎಂಬ ಭೌತಶಾಸ್ತ್ರದ ಬಲವಾದ ಕಾರಣವಿದೆ ಎನ್ನುತ್ತಾರೆ ಐಐಟಿ ಮದ್ರಾಸ್‌ನ ವಿಜ್ಞಾನಿಗಳು

ಏನಿದು ಲೈಡೆನ್‌ಫ್ರಾಸ್ಟ್ ಎಫೆಕ್ಟ್?


ಸಾಮಾನ್ಯವಾಗಿ ನೀರು 100°C ನಲ್ಲಿ ಕುದಿಯುತ್ತದೆ. ಆದರೆ ತವಾ ಅದಕ್ಕಿಂತಲೂ ಅತಿಯಾಗಿ ಬಿಸಿಯಾಗಿದ್ದಾಗ, ಅದರ ಮೇಲೆ ಹಾಕಿದ ನೀರಿನ ಹನಿಗಳು ತಕ್ಷಣ ಆವಿಯಾಗುವ ಬದಲು ಮುತ್ತುಗಳಂತೆ ಪ್ಯಾನ್ ಮೇಲೆ ನೃತ್ಯ ಮಾಡುತ್ತವೆ.

ವಿಜ್ಞಾನದ ಪ್ರಕಾರ, ನೀರಿನ ಹನಿ ಮತ್ತು ಬಿಸಿ ತವಾದ ನಡುವೆ ಉಗಿಯ (Steam) ಒಂದು ತೆಳುವಾದ ಪದರ ಸೃಷ್ಟಿಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪದರವು ನೀರು ನೇರವಾಗಿ ತವಾವನ್ನು ಸ್ಪರ್ಶಿಸದಂತೆ ತಡೆಯುತ್ತದೆ. ಇದನ್ನು ನೋಡಿದ ಕೂಡಲೇ ದೋಸೆ ಹಾಕಲು ತವಾ ರೆಡಿಯಾಗಿದೆ ಎಂದು ಮಾಸ್ಟರ್‌ಗಳಿಗೆ ತಿಳಿಯುತ್ತದೆ.

ಪ್ಯಾನ್ ದೋಸೆ ಹಾಕಲು ಸರಿಯಾದ ತಾಪಮಾನಕ್ಕೆ ಬಂದಿದೆ ಎಂಬುದನ್ನು ಅಡುಗೆಯವರು ತಿಳಿಯಲು ಇದು ಸುಲಭ ಸಂಕೇತ.

ತಾಪಮಾನ ಸಮತೋಲನ ಯಾಕೆ ಮುಖ್ಯ?


ಪ್ಯಾನ್ ಅತಿಯಾಗಿ ಬಿಸಿಯಾಗಿದ್ದರೆ ದೋಸೆ ಹಿಟ್ಟು ಸರಿಯಾಗಿ ಹರಡಲು ಸಾಧ್ಯವಾಗುವುದಿಲ್ಲ ಮತ್ತು ಪ್ಯಾನ್‌ಗೆ ಅಂಟಿಕೊಳ್ಳುತ್ತದೆ. ನೀರು ಚಿಮುಕಿಸುವುದರಿಂದ ಪ್ಯಾನ್‌ನ ತಾಪಮಾನ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ದೋಸೆ ಸುಡದಂತೆ ಸಮವಾಗಿ ಹರಡಲು ಸಹಾಯವಾಗುತ್ತದೆ.

ಐಐಟಿ ಮದ್ರಾಸ್ ಸಂಶೋಧನೆ ಏನು ಹೇಳುತ್ತದೆ?
ಐಐಟಿ ಮದ್ರಾಸ್ ಸಂಶೋಧನೆಯ ಪ್ರಕಾರ, ನೀರು ಚಿಮುಕಿಸಿ ಒರೆಸಿದ ನಂತರ ದೋಸೆ ಹಾಕಿದಾಗ ಪ್ಯಾನ್‌ನ ಶಾಖವು ದೋಸೆಯಾದ್ಯಂತ ಸಮವಾಗಿ ವಿತರಣೆಯಾಗುತ್ತದೆ. ಇದು ದೋಸೆಯನ್ನು ಮಧ್ಯಭಾಗದಿಂದ ಅಂಚಿನವರೆಗೆ ಒಂದೇ ರೀತಿ ಬೇಯಿಸಿ, ಹೋಟೆಲ್ ಸ್ಟೈಲ್‌ನಲ್ಲಿ ಚಿನ್ನದ ಬಣ್ಣ ಬರುವಂತೆ ಮತ್ತು ಗರಿಗರಿಯಾಗುವಂತೆ ಮಾಡುತ್ತದೆ.

ಪರ್ಫೆಕ್ಟ್ ದೋಸೆಗಾಗಿ ಚೆಫ್ ಉಮಾ ರಘುರಾಮನ್ ಟಿಪ್ಸ್:
ಹಿಟ್ಟಿನ ತಾಪಮಾನ: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ದೋಸೆ ಮಾಡುವ 20-30 ನಿಮಿಷಗಳ ಮೊದಲೇ ಹೊರತೆಗೆದಿಡಿ.

ತವಾ ಗ್ರೀಸಿಂಗ್: ಮಧ್ಯಮ ಉರಿಯಲ್ಲಿ ತವಾ ಇರಿಸಿ, ಈರುಳ್ಳಿಯ ಸಹಾಯದಿಂದ ಎಳ್ಳೆಣ್ಣೆಯನ್ನು ಬಳಸಿ ತವಾವನ್ನು ಗ್ರೀಸ್ ಮಾಡಿ.

ಬೇಯಿಸುವ ಕ್ರಮ: ದೋಸೆಯನ್ನು ಕೆಲವು ಸೆಕೆಂಡ್ ಮುಚ್ಚಿಟ್ಟು ಬೇಯಿಸಿ, ನಂತರ ತೆರೆದು ಅದು ತಿಳಿ ಕಂದು ಬಣ್ಣ ಬರುವವರೆಗೆ ಕಾಯಿರಿ.

ತಾಪಮಾನ ನಿರ್ವಹಣೆ: ದೋಸೆ ಹಾಕುವ ನಡುವೆ ತವಾ ತುಂಬಾ ಬಿಸಿಯಾದಾಗ ನೀರು ಚಿಮುಕಿಸಿ ಉರಿಯನ್ನು ಕಡಿಮೆ ಮಾಡುವುದನ್ನು ಮರೆಯಬೇಡಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular