HomeKarnatakaಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಅಹ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ: NIA ಘೋಷಣೆ

ಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಅಹ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ: NIA ಘೋಷಣೆ

ಬೆಂಗಳೂರು: ಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಅಹ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಎಸ್ ಐಎ ಘೋಷಿಸಿದೆ.

ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರ ಜುನೈದ್ ಅಹ್ಮದ್ ಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಎನ್ ಐಎ ಅಧಿಕಾರಿಗಳು ದೇಶ-ವಿದೇಶಗಳಲ್ಲಿಯೂ ಆತನಿಗಾಗಿ ಶೋಧ ನಡೆಸಿದ್ದಾರೆ. ಆದರೆ ಆತನ ಪತ್ತೆಯಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಎನ್ ಐಎ ಅಧಿಕಾರಿಗಳು ಉಗ್ರ ಜುನೈದ್ ಅಹ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಪ್ಅತಿ ಕಂಬಗಳಿಗೂ ಉಗ್ರನ ಬಗ್ಗೆ ವಾಂಟೆಡ್ ಪೋಸ್ಟರ್ ಅಂಟಿಸಿ ಪ್ರಕಟಿಸಲಾಗಿದೆ.

2023ರಲ್ಲಿ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರ ಜುನೈದ್ ಮನೆಯಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಸ್ಫೋಟಕಗಳು ಪತ್ತೆಯಾಗಿದ್ದವು. ಅಲ್ಲದೇ ರಕ್ತಚಂದನ ಕೇಸ್ ನಲ್ಲಿಯೂ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular