HomeLatest Newsಫ್ರಿಡ್ಜ್‌ನಲ್ಲಿಟ್ಟ ದೋಸೆ ಹಿಟ್ಟು ಎಷ್ಟು ದಿನದವರೆಗೆ ಸೇಫ್? ಈ ದಿನ ಮೀರಿದರೆ ಅದು ನಿಮ್ಮ ಹೊಟ್ಟೆಗೆ...

ಫ್ರಿಡ್ಜ್‌ನಲ್ಲಿಟ್ಟ ದೋಸೆ ಹಿಟ್ಟು ಎಷ್ಟು ದಿನದವರೆಗೆ ಸೇಫ್? ಈ ದಿನ ಮೀರಿದರೆ ಅದು ನಿಮ್ಮ ಹೊಟ್ಟೆಗೆ ಕುತ್ತು ತರುವುದು ಗ್ಯಾರಂಟಿ

ಬೆಂಗಳೂರು: ಬೆಳಗಿನ ಉಪಹಾರಕ್ಕೆ ದೋಸೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಕೆಲಸದ ಒತ್ತಡದಲ್ಲಿ ವಾರಕ್ಕೆ ಆಗುವಷ್ಟು ದೋಸೆ ಹಿಟ್ಟನ್ನು ಒಟ್ಟಿಗೆ ರುಬ್ಬಿ (Grinding) ಫ್ರಿಡ್ಜ್‌ನಲ್ಲಿ ಎತ್ತಿಟ್ಟುಕೊಳ್ಳುವ ಅಭ್ಯಾಸ ನಿಮಗಿದ್ದರೆ ಈ ಲೇಖನ ಓದಲೇಬೇಕು. ನೀವು ಅಮೃತ ಅಂದುಕೊಂಡು ತಿನ್ನುತ್ತಿರುವ ದೋಸೆ ನಿಮ್ಮ ಆರೋಗ್ಯವನ್ನು ಮೆಲ್ಲಗೆ ಹಾಳು ಮಾಡುತ್ತಿರಬಹುದು!

3-4 ದಿನ ಮೀರಿದರೆ ಅಪಾಯ ಖಂಡಿತ

ಬೆಂಗಳೂರಿನಂತಹ ಹವಾಮಾನದಲ್ಲಿ ಹಿಟ್ಟು ಬೇಗ ಹುಳಿಯಾಗುತ್ತದೆ. ಸಾಮಾನ್ಯವಾಗಿ ಹಿಟ್ಟನ್ನು 3 ರಿಂದ 4 ದಿನಗಳ ಕಾಲ ಬಳಸಬಹುದು. ಆದರೆ ವಾರಕ್ಕಿಂತ ಹೆಚ್ಚು ಕಾಲ ಇಟ್ಟ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳ ಸಂತತಿ ಮಿತಿ ಮೀರಿ ಹೆಚ್ಚಾಗುತ್ತದೆ. ಇದು ಆಹಾರದ ಗುಣಮಟ್ಟವನ್ನು ಕೆಡಿಸಿ ಫುಡ್ ಪಾಯಿಸನಿಂಗ್‌’ಗೆ ನೇರ ದಾರಿಯಾಗುತ್ತದೆ.

ಹಿಟ್ಟು ವಿಷವಾಗ್ತಿದೆ ಎಂದು ತಿಳಿಯುವುದು ಹೇಗೆ?

ಬಣ್ಣ ಬದಲಾವಣೆ: ಹಿಟ್ಟಿನ ಮೇಲೆ ಕಪ್ಪು ಅಥವಾ ಬೂದು ಬಣ್ಣದ ಪದರ ಕಾಣಿಸಿಕೊಂಡರೆ ಅದನ್ನು ಬಳಸಬೇಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಸನೆ: ಹಿಟ್ಟಿನಿಂದ ಕೆಟ್ಟ ವಾಸನೆ (Bad Odor) ಬರಲು ಶುರುವಾದರೆ ಅದು ಕೆಟ್ಟಿದೆ ಎಂದರ್ಥ.

ಅತಿಯಾದ ಹುಳಿ: 5 ದಿನ ಕಳೆದ ನಂತರ ಅದರಲ್ಲಿ ಲ್ಯಾಕ್ಟಿಕ್ ಆಸಿಡ್ ಪ್ರಮಾಣ ಅತಿಯಾಗಿ ಅದು ಜೀರ್ಣಾಂಗವ್ಯೂಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಹಳೇ ಹಿಟ್ಟಿನಿಂದ ಆಗುವ ಆರೋಗ್ಯ ಸಮಸ್ಯೆಗಳು:

ಜೀರ್ಣಕ್ರಿಯೆ ತೊಂದರೆ: ತಕ್ಷಣಕ್ಕೆ ವಾಂತಿ, ಭೇದಿ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.

ಗ್ಯಾಸ್ಟ್ರಿಕ್ ಸಮಸ್ಯೆ: ಅತಿಯಾದ ಆಮ್ಲೀಯತೆಯಿಂದ ಎದೆನೋವು ಕೂಡ ಬರಬಹುದು.

ಲಿವರ್ ಹಾನಿ: ಫ್ರಿಡ್ಜ್‌ನಲ್ಲಿಟ್ಟರೂ ಗಾಳಿಯ ಸಂಪರ್ಕದಿಂದ ಫಂಗಸ್ (Fungus) ಬೆಳೆಯುವ ಸಾಧ್ಯತೆ ಇರುತ್ತದೆ, ಇದು ಲಿವರ್ ಮತ್ತು ಕರುಳಿನ ಆರೋಗ್ಯವನ್ನು ದೀರ್ಘಕಾಲದವರೆಗೆ ಹಾಳು ಮಾಡುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular