HomeHealthಹಠಾತ್‌ ಲೂಸ್‌ ಮೋಶನ್‌ ಉಂಟಾದರೆ ಗಾಬರಿ ಬೇಡ; ಇಲ್ಲಿದೆ ಅದಕ್ಕೆ ಸುಲಭದ ಮನೆಮದ್ದು

ಹಠಾತ್‌ ಲೂಸ್‌ ಮೋಶನ್‌ ಉಂಟಾದರೆ ಗಾಬರಿ ಬೇಡ; ಇಲ್ಲಿದೆ ಅದಕ್ಕೆ ಸುಲಭದ ಮನೆಮದ್ದು

ಬೇಸಿಗೆಯಲ್ಲಿ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹಠಾತ್ ಅತಿಸಾರವೂ ಅವುಗಳಲ್ಲೊಂದು. ಇದ್ದಕ್ಕಿದ್ದಂತೆ ಲೂಸ್‌ ಮೋಶನ್‌ ಆರಂಭವಾಗುತ್ತದೆ, ಮಲವು ಸಾಮಾನ್ಯಕ್ಕಿಂತ ತೆಳ್ಳಗಾಗುತ್ತದೆ. ಇದಲ್ಲದೆ ಹೊಟ್ಟೆಯಲ್ಲಿ ನೋವು ಮತ್ತು ದೇಹದಲ್ಲಿ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಭಯಪಡಬಾರದು, ಏಕೆಂದರೆ ಅನೇಕ ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯನ್ನು ತೊಡೆದುಹಾಕಬಹುದು.

ಅತಿಸಾರದ ಸಂದರ್ಭದಲ್ಲಿ ಏನು ಮಾಡಬೇಕು ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಔಷಧಿಗಳನ್ನು ತೆಗೆದುಕೊಳ್ಳದೆಯೇ ಲೂಸ್ ಮೋಷನ್ ಸಮಸ್ಯೆಯನ್ನು ಹೋಗಲಾಡಿಸಲು ನೀವು ಬಯಸಿದರೆ, ಅಜ್ಜಿಯ ಕಾಲದ ಅನೇಕ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಇವುಗಳಿಂದ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ.  ಅತಿಸಾರ ಉಂಟಾದಾಗ ದೇಹದಲ್ಲಿ ನೀರಿನ ಕೊರತೆಯಾಗುತ್ತದೆ. ಹಾಗಾಗಿ ದೇಹವನ್ನು ಹೈಡ್ರೇಟ್ ಆಗಿ ಇಡುವುದು ಅನಿವಾರ್ಯ. ಇದಕ್ಕಾಗಿ ಒಂದು ಲೀಟರ್ ನೀರಿನಲ್ಲಿ 5 ಚಮಚ ಸಕ್ಕರೆ ಮತ್ತು ಸ್ವಲ್ಪ ಉಪ್ಪನ್ನು ಮಿಶ್ರಣ ಮಾಡಿ. ದಿನವಿಡೀ ಸ್ವಲ್ಪ ಸ್ವಲ್ಪ ಈ  ದ್ರಾವಣವನ್ನು ಕುಡಿಯಿರಿ.

ಓಮ ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾದ ಮಸಾಲೆ ಪದಾರ್ಥ. ಸ್ವಲ್ಪ ಓಮವನ್ನು ತೆಗೆದುಕೊಂಡು ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಅದನ್ನು ಸೇವಿಸಿ. ಹೀಗೆ ಮಾಡುವುದರಿಂದ ಲೂಸ್‌ ಮೋಶನ್‌ ಕಡಿಮೆಯಾಗುತ್ತದೆ. ಅತಿಸಾರದ ಸಮಯದಲ್ಲಿ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುವ ಯಾವುದೇ ಪದಾರ್ಥಗಳನ್ನು ತಿನ್ನಬೇಡಿ. ಹೆಚ್ಚು ಹೆಚ್ಚು ಲಘುವಾದ ದ್ರವಗಳನ್ನು ತೆಗೆದುಕೊಳ್ಳಿ.  ಹಣ್ಣಿನ ರಸ ಮತ್ತು ಎಳನೀರನ್ನು ಕುಡಿಯಬಹುದು.

ಉಪ್ಪು ಮತ್ತು ನಿಂಬೆರಸ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಲ್ ಗುಣಗಳು ಹೊಟ್ಟೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಬೇಸಿಗೆಯಲ್ಲಿ ಮೊಸರು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಏಕೆಂದರೆ ಈ ಪ್ರಿಬಯೋಟಿಕ್ ಆಹಾರವು ಹೊಟ್ಟೆಗೆ ತಂಪು ನೀಡುತ್ತದೆ, ಇದರಿಂದಾಗಿ ಅತಿಸಾರದ ಸಮಸ್ಯೆ ದೂರವಾಗುತ್ತದೆ. ಲೂಸ್‌ ಮೋಶನ್‌ ಇದ್ದಾಗ ಮೊಸರನ್ನ ತಿನ್ನುವುದು ಸೂಕ್ತ.

For Latest News Updates, Join Our Whatsapp Community🚩
RELATED ARTICLES

Most Popular