HomeInternationalಬೆದರಿಕೆ ಅಲ್ಲ ಮಾತುಕತೆ!, ಟ್ರಂಪ್ ಯೂ ಟರ್ನ್‌ಗೆ ಕಾರಣವೇನು?

ಬೆದರಿಕೆ ಅಲ್ಲ ಮಾತುಕತೆ!, ಟ್ರಂಪ್ ಯೂ ಟರ್ನ್‌ಗೆ ಕಾರಣವೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್‌ಗೆ 48 ಗಂಟೆಗಳ ಗಡುವನ್ನು ನೀಡಿದ್ದರು. ಇಲ್ಲವಾದಲ್ಲಿ ದಾಳಿಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದರು. ಆದರೆ ಈಗ ಟ್ರಂಪ್ ಬೆದರಿಕೆ ಬಿಟ್ಟು ಮಾತುಕತೆಯ ದಾರಿ ಹಿಡಿದಿದ್ದಾರೆ. ಈ ಬದಲಾವಣೆಗೆ ಕಾರಣ ಏನು? ಎಂಬುದು ಸದ್ಯ ಚರ್ಚೆಯ ವಿಚಾರ.

ಇರಾನ್ ವಿಚಾರದಲ್ಲಿ ಟ್ರಂಪ್ ನಿಲುವು ಬದಲಾಗಿದೆ. ಸಂಘರ್ಷದಿಂದ ಸಂಧಾನದತ್ತ ಅಮೆರಿಕ ಹೋಗುತ್ತಿದೆ ಎಂಬ ಚರ್ಚೆಗಳು ಜೋರಾಗಿವೆ. ಕೇವಲ ಮೂರು ದಿನಗಳಲ್ಲಿ ಅಮೆರಿಕದ ನಿಲುವು ಬದಲಾಗಿದೆ. ಟ್ರಂಪ್, ಈಗ ಫಲಪ್ರದ ಚರ್ಚೆಗಳು ಮತ್ತು ಸಂಭಾವ್ಯ ಒಪ್ಪಂದದ ಬಗ್ಗೆ ಮಾತನಾಡುತ್ತಿದ್ದಾರೆ.

ಸೋಮವಾರ ಇರಾನ್ ಈ ವಿವಾದವನ್ನು ಬಗೆಹರಿಸಿಕೊಳ್ಳಲು ಬಯಸುತ್ತಿದೆ ಎಂದು ಅವರು ಬಹಿರಂಗವಾಗಿ ಹೇಳಿದ್ದಾರೆ. ಈ ಕ್ಷಿಪ್ರ ಬದಲಾವಣೆಯ ಹಿಂದೆ ತೆರೆಯ ಮರೆಯ ಕಸರತ್ತುಗಳೇನು? ಎಂಬ ಪ್ರಶ್ನೆ ಮೂಡಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾತುಕತೆಗಳು?: ಇರಾನ್ ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆಯನ್ನು ನಿರಾಕರಿಸಿದೆ. ಟ್ರಂಪ್ ಅವರು ಕೇವಲ ಒಬ್ಬ ಗೌರವಾನ್ವಿತ ಇರಾನ್ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಹೆಚ್ಚಿನ ವಿವರ ನೀಡಿಲ್ಲ. ಸದ್ಯಕ್ಕೆ ಪಾಕಿಸ್ತಾನ, ಓಮನ್, ಟರ್ಕಿ ಮತ್ತು ಈಜಿಪ್ಟ್‌ನಂತಹ ದೇಶಗಳು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಪಾಕಿಸ್ತಾನದಲ್ಲಿ ಸಂಭಾವ್ಯ ಸಭೆಯೊಂದು ನಡೆಯಬಹುದು ಎಂಬ ವರದಿಗಳಿವೆ ಆದರೆ, ಅಧಿಕೃತವಾಗಿಲ್ಲ.

ಅಮೆರಿಕದ ಮಿತ್ರರಾಷ್ಟ್ರಗಳ ಆತಂಕವು ಟ್ರಂಪ್ ಅವರ ಈ ನಿಲುವು ಬದಲಾವಣೆಗೆ ಒಂದು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ, ಪ್ರತಿಯಾಗಿ ಇರಾನ್ ಕೂಡ ಇಡೀ ಪ್ರದೇಶದ ತೈಲ ಮತ್ತು ನೀರಿನ ಸ್ಥಾವರಗಳ ಮೇಲೆ ದಾಳಿ ಮಾಡಬಹುದು ಎಂಬ ಎಚ್ಚರಿಕೆ ಸಿಕ್ಕಿದೆ. ಇದು ಜಾಗತಿಕ ಇಂಧನ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ನಿಲುವು ಬದಲಾವಣೆಯು ಆರ್ಥಿಕ ಒತ್ತಡದ ಸಮಯದಲ್ಲೇ ಸಂಭವಿಸಿದೆ. ಯುದ್ಧದ ಭೀತಿಯಿಂದ ತೈಲ ಬೆಲೆ ಏರಿಕೆಯಾಗುತ್ತಿತ್ತು. ಯಾವಾಗ ಟ್ರಂಪ್ ಮಾತುಕತೆಯ ಸುಳಿವು ನೀಡಿದರೋ, ಆಗ ಷೇರು ಮಾರುಕಟ್ಟೆ ಚೇತರಿಸಿಕೊಂಡಿತು ಮತ್ತು ತೈಲ ಬೆಲೆ ಕುಸಿಯಿತು. ಹೂಡಿಕೆದಾರರನ್ನು ಸಮಾಧಾನಪಡಿಸಲು ಈ ಕ್ರಮ ಸಹಕಾರಿಯಾಯಿತು.

ಟ್ರಂಪ್ ಬೇಡಿಕೆಗಳ ಪಟ್ಟಿಯಲ್ಲಿ ಇರಾನ್ ಎಂದಿಗೂ ಪರಮಾಣು ಅಸ್ತ್ರ ತಯಾರಿಸಬಾರದು ಎಂಬುದು ಮೊದಲನೆಯದಾಗಿದೆ. ಜೊತೆಗೆ ಇರಾನ್‌ನ ಸೇನಾ ಸಾಮರ್ಥ್ಯಕ್ಕೆ ಮಿತಿ, ಪ್ರಾದೇಶಿಕ ಗುಂಪುಗಳಿಗೆ ಬೆಂಬಲ ನಿಲ್ಲಿಸುವುದು ಮತ್ತು ಇಸ್ರೇಲ್ ಅನ್ನು ಗುರುತಿಸುವುದು ಸೇರಿದಂತೆ ಹಲವು ಕಠಿಣ ಷರತ್ತುಗಳನ್ನು ವಿಧಿಸುವ ಸಾಧ್ಯತೆಯಿದೆ. ಇವುಗಳನ್ನು ಒಪ್ಪಿಕೊಳ್ಳುವುದು ಇರಾನ್‌ಗೆ ಸುಲಭವಲ್ಲ. ಆದ್ದರಿಂದ ಮಾತುಕತೆಗಳು ನಡೆದರೂ ಅದು ಫಲ ನೀಡಲಿದೆಯೇ? ಎಂಬುದು ಪ್ರಶ್ನೆಯಾಗಿದೆ.

ಸದ್ಯಕ್ಕೆ ಬೆದರಿಕೆಗಳ ಬದಲಾಗಿ ರಾಜತಾಂತ್ರಿಕ ಮಾತುಕತೆಗೆ ಸಣ್ಣ ಅವಕಾಶ ತೆರೆದುಕೊಂಡಿದೆ. ಆದರೆ ಇರಾನ್‌ನ ನಾಯಕತ್ವದಲ್ಲಿನ ಅಸ್ಥಿರತೆಯಿಂದಾಗಿ ಯಾರ ಜೊತೆ ಒಪ್ಪಂದ ಮಾಡಿಕೊಳ್ಳಬೇಕು? ಎಂಬ ಗೊಂದಲ ಅಮೆರಿಕಕ್ಕಿದೆ. ಈ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಮತ್ತೆ ಉದ್ವಿಗ್ನತೆ ಮರುಕಳಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular