HomeLatest Newsಸಂಗಾತಿ ನಿಮ್ಮ ಭಾವನೆಗಳಿಗೆ ಬೆಲೆ ಕೊಡದೆ ಹೀಗೆ ವರ್ತಿಸುತ್ತಾರಾ....?

ಸಂಗಾತಿ ನಿಮ್ಮ ಭಾವನೆಗಳಿಗೆ ಬೆಲೆ ಕೊಡದೆ ಹೀಗೆ ವರ್ತಿಸುತ್ತಾರಾ….?

ಕೆಲವೊಮ್ಮೆ ಸಂಬಂಧಗಳು ಕ್ಷುಲಕ ಕಾರಣಕ್ಕೆ ಬಿರುಕು ಬಿಡುತ್ತದೆ. ವಾಸ್ತವವಾಗಿ ಇದಕ್ಕೆ ಕಾರಣ ಸಂಗಾತಿಯ ನಡವಳಿಕೆಯಾಗಿರುತ್ತದೆ.

ಹಾಗಾಗಿ ನಿಮ್ಮ ಸಂಗಾತಿಯನ್ನು ಸರಿಯಾಗಿ ತಿಳಿದುಕೊಳ್ಳಿ. ಒಂದು ವೇಳೆ ಅವರಲ್ಲಿ ಸ್ವಾರ್ಥವಿದ್ದರೆ ಅವರು ಇಂತಹ ಕೃತ್ಯಗಳನ್ನು ಮಾಡುತ್ತಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀವು ಹೊರಗಡೆ ಹೋದಾಗ ನಿಮ್ಮ ಸಂಗಾತಿ ಯಾವಾಗಲೂ ಬಿಲ್ ಪಾವತಿಸಲು ಹಿಂಜರಿಯುತ್ತಿದ್ದರೆ ಸ್ವಲ್ಪ ಜಾಗರೂಕರಾಗಿರಿ. ಯಾಕೆಂದರೆ ನಿಮ್ಮ ಸಂಗಾತಿ ತುಂಬಾ ಸ್ವಾರ್ಥಿಯಾಗಿದ್ದಾರೆ ಎಂಬುದನ್ನು ತಿಳಿಯಿರಿ. ಆದಷ್ಟು ಬೇಗ ಈ ಸಂಬಂಧವನ್ನು ಕೊನೆಗೊಳಿಸಿ.

ನೀವು ಪ್ರತಿಬಾರಿ ಪ್ರೀತಿಯನ್ನು ವ್ಯಕ್ತಪಡಿಸಿ ನಿಮ್ಮ ಸಂಗಾತಿಗೆ ಕರೆ, ಮೆಸೇಜ್ ಮಾಡಿದರೆ ಅದನ್ನು ನೋಡಿದರೆ, ಅದಕ್ಕೆ ಸ್ಪಂದಿಸಿದರೆ ಅವರು ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಸಂಬಂಧದಲ್ಲಿ ಎಲ್ಲಾ ಜವಾಬ್ದಾರಿಯನ್ನು ನೀವು ಮಾತ್ರ ತೆಗೆದುಕೊಂಡಿದ್ದೀರಿ ಎಂದು ನಿಮಗೆ ಭಾಸವಾದರೆ ಆ ಸಂಬಂಧವನ್ನು ಕೊನೆಗೊಳಿಸಿ.

ನೀವು ಬಹಳ ದುಃಖದಲ್ಲಿದ್ದಾಗ ನಿಮ್ಮ ದುಃಖದಲ್ಲಿ ನಿಮ್ಮ ಸಂಗಾತಿ ಭಾಗವಹಿಸಲಿಲ್ಲ ಎಂದಾದರೆ ನೀವು ತಪ್ಪು ಸಂಬಂಧದಲ್ಲಿ ಇದ್ದೀರಿ ಎಂದರ್ಥ. ಪ್ರತಿಯೊಬ್ಬರು ತಮ್ಮ ಸಂಗಾತಿಯಿಂದ ಭಾವನಾತ್ಮಕ ಬೆಂಬಲವನ್ನು ನಿರೀಕ್ಷಿಸುತ್ತಾರೆ. ಆದರೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಅವರು ಇರದಿದ್ದರೆ ನೀವು ಸ್ವಾರ್ಥಿಯೊಂದಿಗೆ ಜೀವನ ನಡೆಸುತ್ತಿದ್ದೀರಿ ಎಂದರ್ಥ.

For Latest News Updates, Join Our Whatsapp Community🚩
RELATED ARTICLES

Most Popular