HomeIndiaರೋಗಿಯ ಉದರದಿಂದ 56 ಬ್ಲೇಡ್‌ ತುಂಡುಗಳನ್ನು ಹೊರತೆಗೆದ ವೈದ್ಯರು....!

ರೋಗಿಯ ಉದರದಿಂದ 56 ಬ್ಲೇಡ್‌ ತುಂಡುಗಳನ್ನು ಹೊರತೆಗೆದ ವೈದ್ಯರು….!

ರಾಜಸ್ಥಾನದ ಜಲೋರ್‌ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ 25 ವರ್ಷದ ಯುವಕನ ಹೊಟ್ಟೆಯಿಂದ 56 ರೇಜ಼ರ್‌ ತುಂಡುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.

ಜಿಲ್ಲೆಯ ಸಂಓರೆ ಪ್ರದೇಶದಲ್ಲಿ ಅಕೌಂಟೆಂಟ್ ಆಗಿರುವ ಈತ ಮೂರು ಪ್ಯಾಕ್ ಬ್ಲೇಡುಗಳನ್ನು ನುಂಗಿದ್ದ ಎಂದು ತಿಳಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಸ್ತ್ರಚಿಕಿತ್ಸೆ ನಡೆಸಿದ ತಂಡ ವೈದ್ಯರನ್ನು ಮುನ್ನಡೆಸಿದ ಡಾ ನರ್ಸಿ ರಾಮ್ ದೇವಸಿ, “ಮೂರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ 56 ತುಂಡು ರೇಜ಼ರ್‌ ಬ್ಲೇಡ್‌ಗಳನ್ನು ರೋಗಿಯ ದೇಹದಿಂದ ಹೊರತೆಗೆಯಲಾಗಿದೆ. ಮೂರು ಪ್ಯಾಕ್‌ನಲ್ಲಿದ್ದ ಬ್ಲೇಡ್‌ಗಳನ್ನು ತುಂಡು ತುಂಡಾಗಿಸಿ ನುಂಗಿದ್ದರಿಂದ ಆಂತರಿಕ ರಕ್ತಸ್ರಾವ ಹಾಗೂ ಗಾಯಗಳು ಆಗಿದ್ದವು” ಎಂದು ತಿಳಿಸಿದ್ದಾರೆ.

ರೋಗಿಯ ಸ್ಥಿತಿಯು ಸ್ಥಿರವಾಗಿದ್ದು, ಆತ ಬ್ಲೇಡ್‌ಗಳನ್ನು ನುಂಗುವಂಥದ್ದೇನಾಗಿತ್ತು ಎಂದು ಇದುವರೆಗೂ ಯಾರಿಗೂ ತಿಳಿಸಿಲ್ಲ ಎಂದು ವೈದ್ಯರು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular