HomeIndiaಪ್ರಿಸ್ಕ್ರಿಪ್ಷನ್‌ಗಳಲ್ಲಿ ವೈದ್ಯರ ಕೈಬರಹ; ಒಡಿಶಾ ಹೈಕೋರ್ಟ್‌ ನಿಂದ ಮಹತ್ವದ ಆದೇಶ

ಪ್ರಿಸ್ಕ್ರಿಪ್ಷನ್‌ಗಳಲ್ಲಿ ವೈದ್ಯರ ಕೈಬರಹ; ಒಡಿಶಾ ಹೈಕೋರ್ಟ್‌ ನಿಂದ ಮಹತ್ವದ ಆದೇಶ

ವೈದ್ಯರ ಕೈಬರಹಗಳನ್ನು ಓದುವುದು ಜನಸಾಮಾನ್ಯರಿಗೆ ಅಸಾಧ್ಯ. ಕೆಲವೊಮ್ಮೆ ಮೆಡಿಕಲ್‌ ಸ್ಟೋರ್‌ ಸಿಬ್ಬಂದಿಗೂ ಸ್ಪಷ್ಟತೆ ಸಿಗದೇ ತಪ್ಪಾದ ಔಷಧಿಗಳನ್ನು ಕೊಡುವ ಸಾಧ್ಯತೆ ಇರುತ್ತದೆ. ಆದ್ರೆ ಇನ್ಮೇಲೆ ವೈದ್ಯರು ಸ್ಪಷ್ಟವಾಗಿ ಎಲ್ಲರೂ ಓದಲು ಸಾಧ್ಯವಾಗುವಂತೆ ಪ್ರಿಸ್ಕ್ರಿಪ್ಷನ್‌ ಬರೆಯಬೇಕು. ಈ ಬಗ್ಗೆ ಒಡಿಶಾ ಹೈಕೋರ್ಟ್ ವೈದ್ಯರಿಗೆ ಸೂಚನೆ ನೀಡಿದೆ. ಸ್ಪಷ್ಟವಾಗಿ ಬರೆಯುವಂತೆ ಸೂಚಿಸಿದೆ.

ಪ್ರಕರಣವೊಂದನ್ನು ಆಲಿಸಿದ ಒಡಿಶಾ ಹೈಕೋರ್ಟ್ ತಕ್ಷಣವೇ ಜಾರಿಗೆ ಬರುವಂತೆ ಈ ಕುರಿತು ಸುತ್ತೋಲೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ವೈದ್ಯರು ಎಲ್ಲಾ ಔಷಧಿಗಳು ಮತ್ತು ವೈದ್ಯಕೀಯ ವರದಿಗಳನ್ನು ಸಾಧ್ಯವಾದರೆ ದೊಡ್ಡ ಅಕ್ಷರಗಳಲ್ಲಿ ಬರೆಯಬೇಕು ಅಥವಾ ಟೈಪ್ ಮಾಡಿ ಕೊಡಬೇಕೆಂದು ಸೂಚಿಸಲಾಗಿದೆ.

ಅರ್ಜಿಗೆ ಲಗತ್ತಿಸಲಾದ ಮರಣೋತ್ತರ ಪರೀಕ್ಷೆಯ ವರದಿಯನ್ನು ಸರಿಯಾಗಿ ಓದಲಾಗುತ್ತಿಲ್ಲ ಮತ್ತು ಅದು ಅರ್ಥವಾಗದ ಕಾರಣ ನ್ಯಾಯಮೂರ್ತಿ ಎಸ್‌.ಕೆ. ಪಾಣಿಗ್ರಾಹಿ ಪ್ರಕರಣವನ್ನು ನಿರ್ಧರಿಸಲು ಕಷ್ಟಕರವಾಯ್ತು. ಈ ಹಿನ್ನೆಲೆಯಲ್ಲಿ ಒಡಿಶಾ ಹೈಕೋರ್ಟ್‌ನಿಂದ ಈ ನಿರ್ದೇಶನ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೈಕೋರ್ಟ್‌ನ ಈ ಆದೇಶದ ಪ್ರಕಾರ, ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ಜಾರಿಗೊಳಿಸಿದ ನಂತರ, ಭವಿಷ್ಯದಲ್ಲಿ ಯಾವುದೇ ನ್ಯಾಯಾಲಯವು ಅಂತಹ ದಾಖಲೆಗಳನ್ನು ಓದುವಲ್ಲಿ ಅನಗತ್ಯ ತೊಂದರೆ ಮತ್ತು ‘ಅನಗತ್ಯ ಆಯಾಸ’ ಎದುರಿಸಬೇಕಾಗಿಲ್ಲ.

ತನ್ನ ಹಿರಿಯ ಮಗ ಹಾವು ಕಡಿತದಿಂದ ಮೃತಪಟ್ಟಿರುವುದರಿಂದ ಅವರ ಜ್ಞಾಪಕ ಪತ್ರವನ್ನು ಎಕ್ಸ್‌ಗ್ರೇಷಿಯಾ ಮೊತ್ತಕ್ಕೆ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರೊಬ್ಬರು ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಈ ಪ್ರಕರಣದಲ್ಲಿ ವೈದ್ಯರ ಕೈಬರಹ ಕುರಿತಾದ ಆದೇಶ ಹೊರಬಿದ್ದಿದೆ.

ಭಾರತದಲ್ಲಿ ಮಾತ್ರವಲ್ಲ ವಿಶ್ವದ ಇತರ ದೇಶಗಳ ಜನರು ಕೂಡ ವೈದ್ಯರ ಕೈಬರಹದಿಂದ ತೊಂದರೆಗೀಡಾಗಿದ್ದಾರೆ. ಇಂತಹ ಅನೇಕ ಪ್ರಕರಣಗಳು ಏಷ್ಯಾದಿಂದ ಆಫ್ರಿಕಾದವರೆಗೆ ಬೆಳಕಿಗೆ ಬಂದಿವೆ. ಬಹುತೇಕ ಎಲ್ಲಾ ಕೇಸ್‌ಗಳಲ್ಲಿಯೂ ನ್ಯಾಯಾಲಯಗಳು ಓದಬಹುದಾದಂತಹ ಕೈಬರಹದಲ್ಲಿ ಪ್ರಿಸ್ಕ್ರಿಪ್ಷನ್‌ಗಳನ್ನು ಬರೆಯುವಂತೆ ವೈದ್ಯರಿಗೆ ಆದೇಶಿಸಿವೆ.

For Latest News Updates, Join Our Whatsapp Community🚩
RELATED ARTICLES

Most Popular