HomeHealthʼಕೊತ್ತಂಬರಿ ಬೀಜʼ ಹೀಗೆ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ.....?

ʼಕೊತ್ತಂಬರಿ ಬೀಜʼ ಹೀಗೆ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಅಡುಗೆ ಮನೆಯಲ್ಲಿ ಬಳಸುವ ಕೊತ್ತಂಬರಿ ಬೀಜದಿಂದ ಅದೆಷ್ಟು ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ.

ಆಸಿಡಿಟಿಗೆ ಕೊತ್ತಂಬರಿ ಹೇಳಿ ಮಾಡಿಸಿದ ಔಷಧಿ. ಎರಡು ಚಮಚ ಕೊತ್ತಂಬರಿ ಬೀಜಕ್ಕೆ ಎರಡು ಲೋಟ ನೀರು ಬೆರೆಸಿ 10 ನಿಮಿಷ ಕುದಿಸಿ ಬಳಿಕ ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಸಿಡಿಟಿ ದೂರವಾಗುತ್ತದೆ.

ಕೊತ್ತಂಬರಿಯನ್ನು ಪುಡಿ ಮಾಡಿ 6 ಲೋಟ ನೀರನ್ನು ಕುದಿಸಿ ಮೂರು ಲೋಟಕ್ಕೆ ಇಳಿಸಿ ಸೇವಿಸುವುದರಿಂದ ಬಾಯಿಹುಣ್ಣಿನ ಸಮಸ್ಯೆಯೂ ದೂರವಾಗುತ್ತದೆ. ಮೂಲವ್ಯಾಧಿ ಸಮಸ್ಯೆಗೂ ಇದು ಹೇಳಿ ಮಾಡಿಸಿದ ಕಷಾಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಹವನ್ನು ತಂಪುಗೊಳಿಸುವ ವಿಶೇಷ ಶಕ್ತಿ ಇದಕ್ಕಿದೆ. ಹಾಗಾಗಿ ಹಾಲಿಗೆ ಕೊತ್ತಂಬರಿ ನೀರನ್ನು ಹಾಕಿಯೂ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಕೊತ್ತಂಬರಿ ಬೀಜದ ಪುಡಿಗೆ ಒಂದು ತುಂಡು ಬೆಲ್ಲ ಹಾಕಿ ಕುದಿಸಿ ಕುಡಿಯುವುದರಿಂದ ಗರ್ಭಿಣಿಯರ ವಾಂತಿ, ವಾಕರಿಕೆ ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular