ವಿಪರೀತ ಖಾರ ತಿನ್ನುವ ಅಭ್ಯಾಸವಿದೆಯೇ….? ನಿಮ್ಮನ್ನು ಕಾಡಬಹುದು ಇಂಥಾ ಗಂಭೀರ ಸಮಸ್ಯೆ….!

ಬಹುತೇಕ ಎಲ್ಲರಿಗೂ ಮಸಾಲೆಯುಕ್ತ ಚಟ್‌ ಪಟಾ ತಿನಿಸುಗಳೆಂದರೆ ಬಹಳ ಇಷ್ಟ. ಸಂಜೆಯ ಸ್ನಾಕ್ಸ್‌ಗೂ ಜನರು ಖಾರದ ತಿನಿಸುಗಳನ್ನು ಇಷ್ಟಪಡುತ್ತಾರೆ. ಆದರೆ ವಿಪರೀತ ಖಾರ ಸೇವನೆ ಮಾಡುವುದು ಅಪಾಯಕಾರಿ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಇದರಿಂದ ದೇಹಕ್ಕೆ ಹಲವಾರು ರೀತಿಯ ಹಾನಿ ಉಂಟಾಗುತ್ತದೆ.

ಕೆಂಪು ಮೆಣಸಿನಕಾಯಿ ಅಥವಾ ಅಚ್ಚಖಾರದ ಪುಡಿಯನ್ನು ನಾವೆಲ್ಲ ಅಡುಗೆಗೆ ಬಳಸುತ್ತೇವೆ. ಅಚ್ಚಖಾರದ ಪುಡಿಯನ್ನು ಮಿತಿಮೀರಿ ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ. ಖಾರದ ಆಹಾರಗಳು ದೇಹದಲ್ಲಿ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತವೆ. ಅಧಿಕ ಬಿಪಿ ಇರುವವರು ಜಾಸ್ತಿ ಖಾರ ತಿನ್ನಬಾರದು. ಖಾರ ತಿಂದರೆ ಬಿಪಿ ಸಮಸ್ಯೆ ಹೆಚ್ಚಾಗುತ್ತದೆ.

ಖಾರದ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಮುಖದ ಮೇಲೆ ಮೊಡವೆಗಳು ಮತ್ತು ಕಲೆಗಳು ಕಾಣಿಸಿಕೊಳ್ಳುತ್ತವೆ. ಅತಿಯಾದ ಖಾರ ತೂಕವನ್ನು ಕೂಡ ತ್ವರಿತವಾಗಿ ಹೆಚ್ಚಿಸುತ್ತದೆ. ಏಕೆಂದರೆ ಇದು ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲ ಮಿತಿಮೀರಿ ಖಾರ ತಿನ್ನುವುದರಿಂದ ಪೈಲ್ಸ್ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಮಸಾಲೆ ಮತ್ತು ಖಾರವನ್ನು ಮಿತವಾಗಿ ಸೇವನೆ ಮಾಡುವುದು ಸೂಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read