HomeBeautyನಿಮ್ಮ ಉಗುರಿನ ಸೌಂದರ್ಯ ಹೆಚ್ಚಿಸಲು ಹೀಗೆ ಮಾಡಿ

ನಿಮ್ಮ ಉಗುರಿನ ಸೌಂದರ್ಯ ಹೆಚ್ಚಿಸಲು ಹೀಗೆ ಮಾಡಿ

ಉಗುರನ್ನು ನೋಡಿ ವ್ಯಕ್ತಿತ್ವವನ್ನು ಹೇಳಬಹುದು ಎಂಬ ಮಾತೊಂದಿದೆ. ಹೌದು, ದೇಹಕ್ಕೆ ಬರುವ ಅನಾರೋಗ್ಯ ಮೊದಲು ಕೈಯ ಉಗುರುಗಳಲ್ಲಿ ಕಾಣಿಸುತ್ತದೆ. ಹೀಗಾಗಿ ಆರೋಗ್ಯವಂತರಾಗಿದ್ದರೆ ಮಾತ್ರ ಆಕರ್ಷಕ ಉಗುರುಗಳು ನಿಮ್ಮದಾಗುತ್ತವೆ.

ಸಾಧ್ಯವಾದರೆ ಪ್ರತಿ ದಿನ ಇಲ್ಲವೇ ಎರಡು ದಿನಕ್ಕೊಮ್ಮೆ ನಿಂಬೆಹಣ್ಣಿನ ತುಂಡನ್ನು ಕೈ ಉಗುರುಗಳಿಗೆ ತಿಕ್ಕಿ. ಇದರಿಂದ ಉಗುರು ಸ್ವಚ್ಛವಾಗುತ್ತದೆ ಮಾತ್ರವಲ್ಲದೆ ಸಂದಿಯಲ್ಲಿ ಕಣ್ಣಿಗೆ ಕಾಣದೆ ಉಳಿದುಕೊಂಡ ಕೊಳೆಯೂ ಹೋಗುತ್ತದೆ.

ಉಗುರು ನಿಧಾನವಾಗಿ ಬೆಳೆಯುವುದು ಮತ್ತು ಅಲ್ಲಲ್ಲಿ ಬಿಳಿ ಮಚ್ಚೆ ಕಾಣಿಸಿಕೊಳ್ಳುವುದು ಕ್ಯಾಲ್ಸಿಯಂ ಕೊರತೆಯ ಇಲ್ಲವೇ ಅನಾರೋಗ್ಯದ ಸಂಕೇತ. ತಜ್ಞ ವೈದ್ಯರನ್ನು ಭೇಟಿಯಾಗುವುದು ಉತ್ತಮ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಯಮಿತವಾಗಿ ಉಗುರುಗಳನ್ನು ಕತ್ತರಿಸಿ. ಇದರ ಸುತ್ತಲಿನ ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ. ಇದರಿಂದ ಉಗುರು ವೇಗವಾಗಿ ಬೆಳೆಯುವುದು ನಿಲ್ಲುತ್ತದೆ.

ಉಗುರುಗಳು ಸ್ವಚ್ಛವಾಗಿದ್ದರೆ ಉಗುರುಸುತ್ತಿನಂತಹ ಸಮಸ್ಯೆ ಕಾಡದು. ಹಾಗಾಗಿ ಸಾಧ್ಯವಾದಷ್ಟು ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

For Latest News Updates, Join Our Whatsapp Community🚩
RELATED ARTICLES

Most Popular