ದೇಹದ ಯೂರಿಕ್ ಆಸಿಡ್ ಮಟ್ಟ ನಿಯಂತ್ರಿಸಲು ಹೀಗೆ ಮಾಡಿ

ಮೂತ್ರಪಿಂಡದಲ್ಲಿ ಯೂರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಯೂರಿಕ್ ಆ್ಯಸಿಡ್ ಸಮತೋಲನದಲ್ಲಿ ಇರದೇ ಇದ್ದಾಗ  ಮಧುಮೇಹ ಹಾಗೂ ಅಧಿಕ ತೂಕದಂತಹ ತೊಂದರೆಗಳು ಶುರುವಾಗುತ್ತವೆ. ಅಧಿಕ ಮದ್ಯಪಾನ ಅಥವಾ ಜಂಕ್ ಫುಡ್ ಮತ್ತು ಆಹಾರ ಕ್ರಮದಲ್ಲಿನ ಬದಲಾವಣೆ ಇದಕ್ಕೆ ಕಾರಣ.

ಯೂರಿಕ್ ಆ್ಯಸಿಡ್  ಪ್ರಮಾಣ ಮಹಿಳೆಯರಲ್ಲಿ 2.4 ರಿಂದ 6 ಮಿಲಿಗ್ರಾಮ್  ಹಾಗೂ ಪುರುಷರಲ್ಲಿ 3.4 ರಿಂದ 7 ಮಿಲಿಗ್ರಾಮ್ ಇರುತ್ತದೆ. ಈ ಪ್ರಮಾಣ ಹೆಚ್ಚಾದರೆ ಕಿಡ್ನಿ ಸ್ಟೋನ್ ಮತ್ತು ಸಂಧಿವಾತ ತೊಂದರೆ ಆಗುವ ಸಾಧ್ಯತೆ ಹೆಚ್ಚು.

ಮನೆಮದ್ದಿನಿಂದ ಯೂರಿಕ್ ಆಸಿಡ್ ಮಟ್ಟವನ್ನು ಬಹಳ ಮಟ್ಟಿಗೆ ನಿಯಂತ್ರಿಸಬಹುದು. ಹೆಚ್ಚು ನಾರಿನಂಶ ಇರುವ ಆಹಾರವನ್ನು ಸೇವಿಸಬೇಕು. ಆಯಾ ಋತುವಿಗೆ ಸಿಗುವಂತಹ ಹಣ್ಣುಗಳು, ಸೊಪ್ಪು, ತರಕಾರಿಗಳ ಬಳಕೆ ಮಾಡಬೇಕು.

ಓಂಕಾಳು, ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತೆ. ಇದ್ರಲ್ಲಿ ಒಮೆಗಾ 3 ಆ್ಯಸಿಡ್ ಇದ್ದು, ಪ್ರತಿದಿನ ಮುಕ್ಕಾಲು ಚಮಚದಷ್ಟು ಅಜವಾನವನ್ನು ಹಾಕಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ  ಸೇವಿಸಿದ್ರೆ ಹೆಚ್ಚಿನ ಲಾಭ ಸಿಗುತ್ತೆ. ಅಜವಾನವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ  ಬೆಳಿಗ್ಗೆ ಫಿಲ್ಟರ್ ಮಾಡಿದ ನೀರನ್ನು ಕುಡಿಯಬೇಕು.

ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆ ಇದ್ದರೆ ಇದು ಒಳ್ಳೆ ಮನೆಮದ್ದು. ಇದರಲ್ಲಿ ಫೈಬರ್, ಮೆಗ್ನೀಸಿಯಮ್, ಮ್ಯಾಂಗನೀಸ್ ನಂತಹ ಅನೇಕ ಪೋಷಕಾಂಶಗಳಿದ್ದು, ಇದು ಆ್ಯಸಿಡಿಟಿ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read