HomeSpecialಸುಲಭವಾಗಿ ಬಾಚಣಿಗೆ ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್

ಸುಲಭವಾಗಿ ಬಾಚಣಿಗೆ ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್

ತಲೆಯಲ್ಲಿ ಹೊಟ್ಟು ಅಥವಾ ಧೂಳು ಹೆಚ್ಚಿದಂತೆ ನಿಮ್ಮ ಬಾಚಣಿಗೆ ಕೊಳಕಾಗುವುದು ಹೆಚ್ಚುತ್ತದೆ. ಹಾಗಾಗಿ ಕನಿಷ್ಠ ವಾರಕ್ಕೊಮ್ಮೆಯಾದರೂ ನಿಮ್ಮ ಬಾಚಣಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಬಾಚಣಿಗೆಯಲ್ಲಿರುವ ಕೊಳೆ ಮತ್ತೆ ನಿಮ್ಮ ತಲೆಗೇ ಅಂಟಿಕೊಂಡು ಕೂದಲು ಉದುರುವಿಕೆ, ತುರಿಕೆ ಮೊದಲಾದ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ಬಾಚಣಿಗೆಯನ್ನು ಅರ್ಧ ಗಂಟೆ ಹೊತ್ತು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಬಳಿಕ ಸೋಪು ನೀರಿನಲ್ಲಿ ಅದ್ದಿ ತೊಳೆದರೆ ಅದರ ಕೊಳೆ ದೂರವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಸಿ ಎಸೆಯುವ ಟೂತ್ ಬ್ರಶ್ ನಿಂದಲೂ ಬಾಚಣಿಗೆಯನ್ನು ಸ್ವಚ್ಛ ಮಾಡಬಹುದು. ಬ್ರಶ್ ಗೆ ಒಂದು ಡ್ರಾಪ್ ಹ್ಯಾಂಡ್ ವಾಶ್ ಹಾಕಿ ಅದನ್ನು ಬಾಚಣಿಗೆಯ ಎಳೆಗಳ ಮಧ್ಯೆ ಉಜ್ಜಿ. ಇದರಿಂದ ಆ ಭಾಗದಲ್ಲಿ ಅಂಟಿರುವ ಸಣ್ಣ ಕೂದಲು ಹಾಗೂ ಧೂಳು ದೂರವಾಗುತ್ತದೆ.

ಕೊಳೆ ತುಂಬಿರುವ ಬಾಚಣಿಗೆ ಸ್ವಚ್ಛಗೊಳಿಸಲು ಬೇಕಿಂಗ್ ಸೋಡಾಗೆ ಎರಡು ಚಮಚ ಶ್ಯಾಂಪೂ ಬೆರೆಸಿ. ಅರ್ಧ ಗಂಟೆ ಹೊತ್ತು ಅದರಲ್ಲಿ ನೆನೆಸಿಡಿ. ಬಳಿಕ ಹಳೆಯ ಟೂತ್ ಬ್ರಶ್ ನಿಂದ ತಿಕ್ಕಿ ತೊಳೆದರೆ ಬಾಚಣಿಗೆ ಹೊಸದರಂತಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular