HomeAstroಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಈ ಕೆಲಸ ಮಾಡಿ

ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಈ ಕೆಲಸ ಮಾಡಿ

ಶನಿ ನಮ್ಮ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರ್ತಾನೆ. ನಮ್ಮ ಪ್ರತಿಯೊಂದು ಕೆಲಸದ ಮೇಲೂ ಆತನ ಪ್ರಭಾವವಿರುತ್ತದೆ. ಶನಿಯ ಕೃಪೆಗೆ ಪಾತ್ರರಾದವರು ನಿಶ್ಚಿಂತೆಯಿಂದ ಜೀವನ ನಡೆಸಬಹುದು. ಆದ್ರೆ ಶನಿಯ ಕೆಟ್ಟ ದೃಷ್ಟಿಗೆ ಒಳಗಾದಲ್ಲಿ ಮಾತ್ರ ಅದರಿಂದ ಹೊರ ಬರೋದು ಬಹಳ ಕಷ್ಟ. ಕೆಟ್ಟ ಕಾರ್ಯಗಳನ್ನು ಮಾಡುವವರ ಮೇಲೆ ಶನಿ ಕೆಟ್ಟ ಪ್ರಭಾವ ಬೀರುತ್ತಾನೆ.

ಶನಿಯನ್ನು ಒಲಿಸಿಕೊಳ್ಳುವುದು ಸುಲಭವಲ್ಲ. ಹಾಗಂತ ಕಠಿಣವೂ ಅಲ್ಲ. ಕೆಲವು ಸರಳ ಉಪಾಯಗಳನ್ನು ಅನುಸರಿಸುವ ಜೊತೆಗೆ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಶನಿಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.

ಕಣ್ಣಿರುವ ಶನಿ ದೇವನ ಮೂರ್ತಿಯನ್ನು ಎಂದೂ ದರ್ಶನ ಮಾಡಬೇಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿ ಶನಿವಾರ ಕೆಂಪು ಬಟ್ಟೆ ಧರಿಸಿ ಶನಿ ದೇವನ ಮುಂದೆ ಹೋಗಿ.

ಹನುಮಾನ್ ಚಾಲಿಸ್ ಪಠಣ ಮಾಡಿ.

ಪ್ರತಿದಿನ ಸಂಜೆ ಪಶ್ಚಿಮ ದಿಕ್ಕಿಗೆ ದೀಪವನ್ನು ಹಚ್ಚಿ ಶನಿಯ ಮಂತ್ರವನ್ನು ಹೇಳಿ.

ಮನೆಯ ಮಕ್ಕಳು ಹಾಗೂ ಕೆಲಸದವರ ಜೊತೆ ಕೆಟ್ಟದಾಗಿ ನಡೆದುಕೊಳ್ಳಬೇಡಿ.

ನೀಲಿ ಬಣ್ಣವನ್ನು ಹೆಚ್ಚಾಗಿ ಬಳಸಿ.

ಪ್ರಾಮಾಣಿಕವಾಗಿ ವ್ಯವಹಾರ ಮಾಡಿ. ಹಿರಿಯರಿಗೆ ಗೌರವ ನೀಡಿ ಹಾಗೂ ಸತ್ಯವನ್ನು ಹೇಳಿ.

ತುಳಸಿ ಹಾಗೂ ಅಶ್ವತ್ಥ ಮರಕ್ಕೆ ನೀರು ಹಾಕಿ.

ಶನಿವಾರ ಸಾಸಿವೆ ಎಣ್ಣೆಯನ್ನು ಶನಿ ದೇವಸ್ಥಾನಕ್ಕೆ ನೀಡಿ.

For Latest News Updates, Join Our Whatsapp Community🚩
RELATED ARTICLES

Most Popular