
ಅನೇಕರು ಶಾಂಪೂವನ್ನು ನೇರವಾಗಿ ಕೂದಲಿಗೆ ಹಾಕಿ ಮಸಾಜ್ ಮಾಡ್ತಾರೆ. ಇದು ತಪ್ಪು. ಮೊದಲು ಶಾಂಪೂ ಬಳಸುವುದು ಹೇಗೆ ಎಂಬುದನ್ನು ತಿಳಿಯಬೇಕು. ಒಂದು ಮಗ್ ಗೆ ನೀರನ್ನು ಹಾಕಿ, ಅದಕ್ಕೆ ಶಾಂಪೂ ಹಾಕಿ ಚೆನ್ನಾಗಿ ಕಲಕಿ. ನಂತರ ಆ ನೀರನ್ನು ತಲೆಗೆ ಹಾಕಿ ಮಸಾಜ್ ಮಾಡಿ.
ಶಾಂಪೂ ಬಳಸಿದ ನಂತ್ರ ಕಂಡಿಷನರ್ ಬಳಸಿ. ನೆತ್ತಿಯ ಮೇಲೆ ಕಂಡಿಷನರ್ ಹಾಕಬೇಡಿ. ಕೂದಲಿನ ತುದಿಗೆ ಕಂಡಿಷನರ್ ಹಾಕಿ ಮಸಾಜ್ ಮಾಡಿ. ಕಂಡಿಷನರ್ ಹಾಕಿ 2 ನಿಮಿಷದ ನಂತ್ರ ತಲೆ ಸ್ವಚ್ಛಗೊಳಿಸಿ.
ಕೆಲವರು ಪ್ರತಿ ದಿನ ಶಾಂಪೂ ಬಳಸುತ್ತಾರೆ. ಪ್ರತಿ ದಿನ ಶಾಂಪೂ ಬಳಸುವುದ್ರಿಂದ ಕೂದಲು ಹೆಚ್ಚಿನ ಸಂಖ್ಯೆಯಲ್ಲಿ ಉದುರುತ್ತದೆ.
ಗಿಡಮೂಲಿಕೆ ಮತ್ತು ಆಯುರ್ವೇದ ಶಾಂಪೂಗಳನ್ನು ಬಳಸಬೇಕು. ರಾಸಾಯನಿಕ ಶಾಂಪೂ ಬಳಸಬೇಡಿ. ಇದು ಕೂದಲುದುರುವ ಸಮಸ್ಯೆಯನ್ನು ಹೆಚ್ಚಿಸುತ್ತದೆ.

