ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಶಿವಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಅಕ್ರಮಗಳ ಆರೋಪಗಳನ್ನು ಮಾಡಿದ್ದಾರೆ.
ತಮ್ಮ ಪೋಸ್ಟ್ನಲ್ಲಿ, “ದಾಖಲೆಗಳು ಸ್ಪಷ್ಟವಾಗಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ನಡೆಸಿರುವ ಹಾಗೂ ತಮ್ಮ ಇಡೀ ಕುಟುಂಬವನ್ನು ಅಕ್ರಮಗಳಲ್ಲಿ ಭಾಗಿದಾರರನ್ನಾಗಿ ಮಾಡಿರುವುದು ರುಜುವಾತಾಗಿದೆ” ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದೇ ವೇಳೆ, ಮುಖ್ಯಮಂತ್ರಿ ಪರವಾಗಿ ಮಾತನಾಡುತ್ತಿರುವ ಕೆಲ ಸಚಿವರನ್ನು ಟೀಕಿಸಿರುವ ಅವರು, ದಾಖಲೆಗಳನ್ನು ಓದುವ ಸಾಮರ್ಥ್ಯವೂ ಇಲ್ಲದಿದ್ದರೂ ಸಚಿವರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. “ಸಿಎಂ ಸಾಹೇಬರನ್ನು ಸಮರ್ಥಿಸಿಕೊಳ್ಳದಿದ್ದರೆ ಸಂಪುಟದಲ್ಲಿ ಉಳಿಗಾಲವಿಲ್ಲ ಎಂಬ ಭಯಕ್ಕೆ ಕಿರುಚುತ್ತಿದ್ದಾರೆ” ಎಂದು ಹೇಳಿದ್ದಾರೆ.
ಹೆಚ್ಡಿಕೆ ಟ್ವೀಟ್
ದಾಖಲೆಗಳು ಸ್ಪಷ್ಟವಾಗಿವೆ, ಮುಖ್ಯಮಂತ್ರಿ @DKShivakumarಸ್ವತಃ ನಡೆಸಿರುವ, ತಮ್ಮ ಇಡೀ ಕುಟುಂಬವನ್ನು ಅಕ್ರಮಗಳಲ್ಲಿ ಭಾಗಿದಾರರನ್ನಾಗಿ ಮಾಡಿರುವುದು ಅಕ್ಷರಶಃ ರುಜುವಾತಾಗಿದೆ. ಆದರೂ ಕೆಲ ಸೈಡ್ ವಿಂಗ್ ನಾಲಿಗೆಗಳು ವ್ಯರ್ಥ ಸಮರ್ಥನೆಗೆ ಇಳಿದಿವೆ. ಪಾಪ.. ಅವಕ್ಕೆ ವಿದ್ಯೆಬುದ್ಧಿ ಗೊತ್ತಿಲ್ಲ. ದಾಖಲೆಗಳನ್ನು ಓದಿಕೊಳ್ಳುವ ಬೌದ್ಧಿಕ ಸಾಮರ್ಥ್ಯವು ಇಲ್ಲ! ಆದರೂ ಮಂತ್ರಿಗಳಾಗಿದ್ದಾರೆ!! ಅಕ್ರಮ ಸಂಪತ್ತು ಗಳಿಸಿದ ಸಿಎಂ ಸಾಹೇಬರನ್ನು ಸಮರ್ಥಿಸಿಕೊಳ್ಳದಿದ್ದರೆ ಸಂಪುಟದಲ್ಲಿ ಉಳಿಗಾಲವಿಲ್ಲ. ಆ ಭಯಕ್ಕೆ ಕಿರುಚುತ್ತಿವೆ. ಹೆಚ್.ಡಿ.ದೇವೇಗೌಡರ ಕಾಲದಲ್ಲಿ ಏನಾಯ್ತು? ಜೆ.ಎಚ್.ಪಟೇಲರ ಕಾಲದಲ್ಲಿ ಏನಾಯ್ತು? ಆ ನಂತರ ಬಂದ ಆಕ್ಸ್ಫರ್ಡ್ ಯುನಿವರ್ಸಿಟಿ ಪದವೀಧರರ ಸರಕಾರದಲ್ಲಿ ಹಾಲಿ ಸಿಎಂ ಮಹಾಶಯ ನಗರಾಭಿವೃದ್ಧಿ ಸಚಿವರಾಗಿ, BMICPA ಅಧ್ಯಕ್ಷರಾಗಿ ಎಸಗಿರುವ ಅಕ್ರಮಗಳನ್ನು ದಾಖಲೆಗಳೇ ಸಾರಿ ಸಾರಿ ಹೇಳುತ್ತಿದೆ.
ಪೌರಕಾರ್ಮಿಕರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ : ಜಿಲ್ಲಾಧಿಕಾರಿ
ಹಾಸನ : ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ನಿಗಾವಹಿಸುವುದರ ಜೊತೆಗೆ ಮತ್ತು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಎಂದು ಜಿಲ್ಲಾಧಿಕಾರಿ ಕೆ. ಎಸ್ ಲತಾಕುಮಾರಿ ಅವರು ತಿಳಿಸಿದ್ದಾರೆ.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ನಮ್ಮ ನಗರದ ಸ್ವಚ್ಛ-ಸುಂದರ, ಆರೋಗ್ಯಕರವಾಗಿರಲು ಮೂಲ ಕಾರಣಕರ್ತರು ಪೌರಕಾರ್ಮಿಕರ, ಅವರ ಸುಭದ್ರತೆಗೆ ನಾವೇಲ್ಲರೂ ಕೈ ಜೋಡಿಸೋಣ ಎಂದು ತಿಳಿಸಿದರು.
ಪೌರಕಾರ್ಮಿಕರು ತಮ್ಮ ದಿನವನ್ನು ನಗರ ಸ್ವಚ್ಛಗೊಳಿಸುವ ಮೂಲಕ ಪ್ರಾರಂಭಿಸುತ್ತಾರೆ, ಸಮಾಜ ಮತ್ತು ನಗರದ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಅವರ ಬದ್ಧತೆಯನ್ನು ಮೆಚ್ಚಲೇಬೇಕು ಎಂದು ಹೇಳಿದರು.
ಪೌರ ಕಾರ್ಮಿಕರ ಸೇವೆಯನ್ನು ಸ್ಮರಿಸುತ್ತಾ ಅವರ ನಿಸ್ವಾರ್ಥ ಸೇವೆಗೆ ಅಭಿನಂದನೆ ಹೇಳುತ್ತಾ ಅವರ ಅಮೂಲ್ಯವಾದ ಸೇವೆಯನ್ನು ನೆನಪು ಮಾಡಿಕೊಳ್ಳೋಣ ಎಂದ ಅವರು ಸ್ವಚ್ಛತಕಾರರಾಗಿ ಹೆಚ್ಚಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದರು.
ಪೌರಕಾರ್ಮಿಕರ ಆರ್ಥಿಕ, ಸಾಮಾಜಿಕ ಸಬಲತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ, ಅದರ ಉಪಯೋಗವನ್ನು ಪೌರಕಾರ್ಮಿಕರು ಪಡೆದುಕೊಳ್ಳುವಂತೆ ತಿಳಿಸಿದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಆರ್ ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರುದ್ರಮುನಿ ಹಾಗೂ ಮತ್ತಿತರರು ಹಾಜರಿದ್ದರು.

