HomeKarnatakaಈ ಬಾರಿ ನಿಂಬೆಹಣ್ಣು ಕೆಲಸ ಮಾಡಲ್ಲ, ಉಲ್ಟಾ ಹೊಡೆಯುತ್ತೆ: ಹೆಚ್.ಡಿ. ರೇವಣ್ಣಗೆ ಡಿ.ಕೆ. ಸುರೇಶ್ ಟಾಂಗ್

ಈ ಬಾರಿ ನಿಂಬೆಹಣ್ಣು ಕೆಲಸ ಮಾಡಲ್ಲ, ಉಲ್ಟಾ ಹೊಡೆಯುತ್ತೆ: ಹೆಚ್.ಡಿ. ರೇವಣ್ಣಗೆ ಡಿ.ಕೆ. ಸುರೇಶ್ ಟಾಂಗ್

ಹಾಸನ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ನಿಂಬೆಹಣ್ಣು ಕೆಲಸ ಮಾಡುವುದಿಲ್ಲ. ನಿಂಬೆಹಣ್ಣು ಉಲ್ಟಾ ಹೊಡೆಯಲು ಪ್ರಾರಂಭವಾಗಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಹೊಳೆನರಸೀಪುರದ ಜಯಲಕ್ಷ್ಮಿ ಮಿಲ್ ಆವರಣದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ತಿರುಗೇಟು ನೀಡಿದ್ದಾರೆ. ಹೊಳೆನರಸೀಪುರದ ದೈತ್ಯ ಶಕ್ತಿಗಳು ಬೆದರಿಸಿ, ಹೆದರಿಸಿ ಬೇರೆ ಬೇರೆ ರೀತಿಯ ಆಮಿಷ ತೋರಿಸಿ 25 ವರ್ಷಗಳಿಂದ ಗೆದ್ದಿದ್ದಾರೆ. ಈ ಬಾರಿ ಇಂತಹ ಆಟಗಳು ನಡೆಯುವುದಿಲ್ಲ. ಯಾವುದೇ ನಿಂಬೆಹಣ್ಣು ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular