HomeLatest NewsSHOCKING: ಮದುವೆಯಾದ 24 ಗಂಟೆಯೊಳಗೆ ವಿಚ್ಛೇದನ ಪಡೆದ ದಂಪತಿ!

SHOCKING: ಮದುವೆಯಾದ 24 ಗಂಟೆಯೊಳಗೆ ವಿಚ್ಛೇದನ ಪಡೆದ ದಂಪತಿ!

ಪುಣೆ: ಇತ್ತೀಚಿನ ದಿನಗಳಲ್ಲಿ ವಿವಾಹ ಸಂಬಂಧಗಳು, ಪರಸ್ಪರ ಹೊಂದಾಣಿಕೆ ಎಂಬುದು ಎಷ್ಟರಮಟ್ಟಿಗೆ ಜಟಿಲವಾಗಿದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮದುವೆಯಾದ ಕೇವಲ 24 ಗಂಟೆಯೊಳಗೆ ನವದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ವಿಚಿತ್ರ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ.

ಪ್ರೀತಿಸಿ ವಿವಾಹವಾಗಿದ್ದ ಜೋಡ್ಯ ನಡುವೆ ಮದುವೆಯಾದ ಒಂದು ದಿನದೊಳಗೆ ಭಿನಾಭಿಪ್ರಾಯ ಶುರುವಾಗಿದ್ದು, ಒಂದೇ ಜಗಳದಲ್ಲಿ ವಿಚ್ಛೇದನದವರೆಗೂ ತಲುಪಿ ದಂಪತಿ ಬೇರೆಯಾಗಿದ್ದಾರೆ. ಕೇವಲ 24 ಗಂಟೆಯೊಳಗೆ ಪತಿ-ಪತ್ನಿ ವಿಚ್ಛೇಧನ ಪಡೆಯುವ ನಿರ್ಧಾರ ಮಾಡಿದ್ದಾರೆ. ಜೊತೆಗಿರಲು, ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಿ ಡಿವೋರ್ಸ್ ಪಡೆದುಕೊಂಡೇ ಬಿಟ್ಟಿದ್ದಾರೆ.

ಮದುವೆಗೂ ಮುನ್ನ ಯುವಕ ಹಾಗೂ ಯುವತಿ ಇಬ್ಬರೂ ನಾಲ್ಕು ವರ್ಷಗಳಿಂದ ಚಿರಪರಿಚಿತರು. ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ಮದುವೆಯಾದ ಒಂದೇ ದಿನಕ್ಕೆ ಪತಿ-ಪತ್ನಿ ನಡುವೆ ನಿರೀಕ್ಷೆಗೂ ಮೀರಿದ ಭಿನಾಭಿಪ್ರಾಯವಾಗಿ ಕ್ಷಣದಲ್ಲೇ ವಿಚ್ಛೇದನ ಪಡೆದಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಧಾವಂತದ ಬದುಕಿನಲ್ಲಿ ವಿವಾಹ ಸಂಬಂಧಗಳು ಎಷ್ಟು ಸುಲಭದಲ್ಲಿ ಕಳಚಿ ಬೀಲುತ್ತವೆ ಎಂಬುದಕ್ಕೆ ಈ ಘಟನೆ ನಿದರ್ಶನ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ನಿ ವೈದ್ಯೆ ಹಾಗೂ ಪತಿ ವೃತ್ತಿಯಲ್ಲಿ ಇಂಜಿನಿಯರ್. ಮದುವೆಗೂ ಮುನ್ನ ನಾಲ್ಕು ವರ್ಷಗಳ ಪರಿಚಯ, ಎರಡು ವರ್ಷಗಳಿಂದ ಲಿವ್-ಇನ್-ಸಂಬಂಧದಲ್ಲಿ ಇದ್ದರು. ಆದರೆ ಮದುವೆಯಾಗುತ್ತಿದ್ದಂತೆ ಇಬ್ಬರ ನಡುವೆ ಮುಂದಿನ ಜೀವನದ ಬಗ್ಗೆ ಅನಗತ್ಯ ಗೊಂದಲ ಶುರುವಾಗಿದೆ ಸೈದ್ಧಾಂತಿಕ ಭಿನಾಭಿಪ್ರಾಯ ತೀವ್ರಗೊಂಡಿದೆ. ಜೊತೆಗಿರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಕ್ಕೆ ನಿರ್ಧಾರ ಮಾಡಿದ್ದಾರೆ. ಯಾವುದೇ ಹಿಂಸೆ- ಘರ್ಷಣೆಗಳೂ ಇಲ್ಲದೇ ಇಬ್ಬರೂ ಬೇರ್ಪಡಲು ತೀರ್ಮಾನಿಸಿ ವಿಚ್ಛೇದನ ಪಡೆದಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ಇಷ್ಟಕ್ಕು ನಡೆದಿದ್ದೇನು ಎಂದು ನೋಡುವುದಾದರೆ ಯುವತಿ ವೈದ್ಯೆ. ಯುವಕ ಕೂಡ ತಾನು ವೈದ್ಯನೆಂದೇ ಹೇಳಿಕೊಂಡಿದ್ದ. ಹಾಗಾಗಿ ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು, ಮದುವೆಯಾದ ದಿನ ಪತಿ ವೈದ್ಯನಲ್ಲ ಎಂಬುದು ಗೊತ್ತಾಗಿದೆ. ಇದರಿಂದ ಯುವತಿ ಶಾಕ್ ಆಗಿದ್ದಾಳೆ. ಅಲ್ಲದೇ ಆತ ಮರ್ಚೆಂಟ್ ನೇವಿಯಲ್ಲಿ ಇಂಜಿನಿಯರ್. ಆಗಾಗ ಐದಾರು ತಿಂಗಳು ಮನೆಯಿಂದ ಹೊರ ಹೋಗಬೇಕಾಗುತ್ತದೆ ಎಂಬುದು ತಿಳಿದುಬಂದಿದೆ. ಇದರಿಂದ ಆಘಾತಗೊಂಡ ಯುವತಿ ಮದುವೆ ಸಂಬಂಧ ಮುಂದುವರೆಯುವುದೇ ಬೇಡ ಎಂದು ನಿರ್ಧರಿಸಿದ್ದಾಳೆ. ಇಬ್ಬರೂ ಬೇರ್ಪಟ್ಟಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular