HomeIndiaBIG NEWS: ನಿಯಂತ್ರಣ ಕಳೆದುಕೊಂಡು ಪ್ಯಾರಾಗ್ಲೈಡರ್ ಭೀಕರ ಅಪಘಾತ: ಪೈಲಟ್ ಸಾವು; ಓರ್ವ ಪ್ರವಾಸಿಗನ ಸ್ಥಿತಿ...

BIG NEWS: ನಿಯಂತ್ರಣ ಕಳೆದುಕೊಂಡು ಪ್ಯಾರಾಗ್ಲೈಡರ್ ಭೀಕರ ಅಪಘಾತ: ಪೈಲಟ್ ಸಾವು; ಓರ್ವ ಪ್ರವಾಸಿಗನ ಸ್ಥಿತಿ ಗಂಭೀರ

ಕಂಗ್ರಾ: ಟೆಕ್ ಆಫ್ ಆದ ಕೆಲವೇ ಸಮಯದಲ್ಲಿ ಪ್ಯಾರಾಗ್ಲೈಡರ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಪೈಲಟ್ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ ನಡೆದಿದೆ.

ಟೇಕ್ ಆಫ್ ಆದ ಕೆಲ ಸಮಯದಲ್ಲಿಯೇ ಪ್ಯಾರಾಗ್ಲೈಡರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ನಿಯಂತ್ರಣ ಕಳೆದುಕೊಂಡಿದೆ. ಪ್ಯಾರಾಗ್ಲೈಡರ್ ಬೀರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಸೈಟ್ ಸ್ಥಳದಲ್ಲಿ ಅಪಘಾತಕ್ಕೀಡಾಗಿದ್ದು, ಪೈಲಟ್ ಮೃತಪಟ್ಟಿದ್ದಾರೆ. ಓರ್ವ ಪ್ರವಾಸಿಗ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ಬೆನ್ನಲ್ಲೇ ಒಂದು ದಿನದ ಮಟ್ಟಿಗೆ ಎಲ್ಲಾ ಪ್ಯಾರಾಗ್ಲೈಡಿಂಗ್ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಬರೋಟ್ ನಿವಾಸಿ ಮೋಹನ್ ಸಿಂಗ್ ಮೃತ ಪೈಲಟ್. ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular