HomeKarnataka'ವಿಮಾ ಕ್ಲೇಮ್' ತಿರಸ್ಕರಿಸಿದ್ದ ಬ್ಯಾಂಕ್ ಮತ್ತು ವಿಮಾ ಕಂಪನಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ದಂಡ

‘ವಿಮಾ ಕ್ಲೇಮ್’ ತಿರಸ್ಕರಿಸಿದ್ದ ಬ್ಯಾಂಕ್ ಮತ್ತು ವಿಮಾ ಕಂಪನಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ದಂಡ

ಬಳ್ಳಾರಿ : ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ವಿಮಾ ಮೊತ್ತವನ್ನು ನೀಡಲು ನಿರಾಕರಿಸಿದ ಬ್ಯಾಂಕ್ ಮತ್ತು ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೃತರ ಪತಿಗೆ ವಿಮಾ ಮೊತ್ತದೊಂದಿಗೆ ಪರಿಹಾರ ಮತ್ತು ಬಡ್ಡಿ ಪಾವತಿಸುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ

ಬಳ್ಳಾರಿಯ ನಿವಾಸಿ ಪ್ರಭುಗೌಡ ಬಿರಾದಾರ ಅವರ ಪತ್ನಿ ಬಸವ್ವ ಅವರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಅವರು ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ’ ಯಡಿ ವಾರ್ಷಿಕ 20 ರೂ. ಪ್ರೀಮಿಯಂ ಪಾವತಿಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2024ರ ಸೆ.13 ರಂದು ಬಸವ್ವ ಅವರು ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ಪೆಟ್ಟಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೃತರ ಪತಿ ಪ್ರಭುಗೌಡ ಅವರು ವಿಮಾ ಮೊತ್ತಕ್ಕಾಗಿ ಅರ್ಜಿ ಸಲ್ಲಿಸಿದಾಗ, ವಿಮಾ ಕಂಪನಿಯು ಕ್ಲೇಮ್ ಅನ್ನು ತಿರಸ್ಕರಿಸಿತ್ತು.

ನಾವು ಕೇವಲ ಮಧ್ಯಸ್ಥಗಾರರಾಗಿ ಕೆಲಸ ಮಾಡಿದ್ದೇವೆ, ದಾಖಲೆಗಳನ್ನು ವಿಮಾ ಕಂಪನಿಗೆ ರವಾನಿಸಿದ್ದೇವೆ. ಇದರಲ್ಲಿ ನಮ್ಮ ತಪ್ಪಿಲ್ಲ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ವಾದಿಸಿತ್ತು.ಮಹಿಳೆಯು 2008ರಲ್ಲಿ ಕಾಲು ಮುರಿದುಕೊಂಡ ಗಾಯದಿಂದ ಮೃತಪಟ್ಟಿದ್ದಾರೆ ವಿನಃ ಇತ್ತೀಚಿನ ಅಪಘಾತದಿಂದಲ್ಲ ಎಂದು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಲಿಮಿಟೆಡ್ ವಿಮಾ ಕಂಪನಿ ವಾದ ಮಂಡಿಸಿ ಕ್ಲೇಮ್ ತಿರಸ್ಕರಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಹಾಗೂ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ ಅವರು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆಗೆ ಬಿದ್ದ ಪೆಟ್ಟಿನಿಂದಲೇ ಸಾವು ಸಂಭವಿಸಿದೆ ಎಂದು ಸ್ಪಷ್ಟವಾಗಿದೆ. ಯೋಜನೆಯ ನಿಯಮಗಳ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಿಲ್ಲದಿರುವುದು ಸೇವಾ ನಿರ್ಲಕ್ಷö್ಯವಾಗಿದೆ. ಬಾಹ್ಯ ಅಪಘಾತದಿಂದ ಸಾವು ಸಂಭವಿಸಿರುವುದು ದೃಢಪಟ್ಟಿರುವುದರಿಂದ ವಿಮಾ ಮೊತ್ತವನ್ನು ನೀಡದಿರುವುದು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟರು.

ಅಪಘಾತ ವಿಮಾ ಮೊತ್ತವಾಗಿ 2,00,000 ರೂ., ದೂರು ದಾಖಲಾದ ದಿನಾಂಕದಿAದ ಈ ಮೊತ್ತಕ್ಕೆ ಶೇ.6 ರಷ್ಟು ಬಡ್ಡಿ ನೀಡಬೇಕು. ಸೇವಾ ನಿರ್ಲಕ್ಷ ಮತ್ತು ಮಾನಸಿಕ ಯಾತನೆಗಾಗಿ 10,000 ರೂ. ಹಾಗೂ 5,000 ರೂ. ದೂರಿನ ವೆಚ್ಚವಾಗಿ ಪಾವತಿಸಬೇಕು. ಈ ಎಲ್ಲಾ ಮೊತ್ತವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಜಂಟಿಯಾಗಿ ದೂರುದಾರರಿಗೆ ಪಾವತಿಸಬೇಕೆಂದು ಆಯೋಗವು ತನ್ನ ತೀರ್ಪಿನಲ್ಲಿ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular