ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ಒಂದು ಸೈಟ್ ಅಥವಾ ಜಮೀನು ಖರೀದಿಸುವ ಕನಸು ಕಾಣುತ್ತಿದ್ದೀರಾ? ಭೂಮಿಯ ನಕ್ಷೆ ಮತ್ತು ದಾಖಲೆಗಳ ವಿಚಾರದಲ್ಲಿ ನಿಮಗೆ ಮೋಸ ಮಾಡಲು ಭೂಗಳ್ಳರು ಹೋದಲ್ಲೆಲ್ಲಾ ಹೊಂಚು ಹಾಕುತ್ತಿದ್ದಾರೆ. ಸಾಲ ಸೋಲ ಮಾಡಿ ಆಸ್ತಿ ಖರೀದಿಸುವಾಗ ಎಷ್ಟೋ ಮಂದಿ ಸರಿಯಾದ ಮಾಹಿತಿ ಇಲ್ಲದೆ, ನಕಲಿ ದಾಖಲೆಗಳಿಗೆ ಮರುಳಾಗಿ ತಮ್ಮ ಜೀವನದ ಉಳಿತಾಯವನ್ನೆಲ್ಲಾ ಕಳೆದುಕೊಂಡು ಬೀದಿಗೆ ಬಿದ್ದ ಉದಾಹರಣೆಗಳು ಸಾಕಷ್ಟಿವೆ.
ಭೂಗಳ್ಳರ ಜಾಲಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಈಗ ಬಲಿಷ್ಠವಾದ ಅಸ್ತ್ರವೊಂದನ್ನು ಸಾರ್ವಜನಿಕರ ಕೈಗಿಟ್ಟಿದೆ. ಅದೇ ಕಂದಾಯ ಇಲಾಖೆಯ ಹೆಮ್ಮೆಯ ಕೊಡುಗೆ ದಿಶಾಂಕ್ (Dishaank) ಆ್ಯಪ್.ನಿಮ್ಮ ಕೃಷಿ ಭೂಮಿಯನ್ನು ಅಳೆಯಬಹುದು ಮತ್ತು ಅದನ್ನು ಸರ್ವೆ ಇಲಾಖೆಯ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬಹುದಾದ ವಿಶೇಷ ಆನ್‌ಲೈನ್ ಯೋಜನೆ ಇದಾಗಿದೆ
ಏನಿದು ದಿಶಾಂಕ್ ಆ್ಯಪ್?
ಸರಳವಾಗಿ ಹೇಳಬೇಕೆಂದರೆ, ಇದು ಭೂನಕ್ಷೆಯನ್ನು ಬೆರಳ ತುದಿಯಲ್ಲೇ ತಿಳಿಸುವ ಸರ್ಕಾರಿ ಸ್ವಾಮ್ಯದ ಅಧಿಕೃತ ಆ್ಯಪ್. ಸರ್ವೆ ಇಲಾಖೆಯ ಅತ್ಯುತ್ತಮ ತಂತ್ರಾಂಶವಾಗಿರುವ ಇದು, ರಾಜ್ಯದ 30 ಜಿಲ್ಲೆಗಳ ಪ್ರತಿ ಇಂಚು ಭೂಭಾಗದ ಮಾಹಿತಿ ಮತ್ತು ಸರ್ವೆ ನಂಬರ್‌ಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ.
ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ಈ ಆಪನ್ನು ಅಭಿವೃದ್ಧಿಪಡಿಸಲಾಗಿದೆ. ಕಂದಾಯ ಇಲಾಖೆಯು ಪರಿಚಯಿಸಿರುವ ಈ ಆಪ್ ಎಲ್ಲಾ ರೈತ ಮಿತ್ರರಿಗೆ ತುಂಬಾ ಸಹಾಯಕವಾಗಿದೆ. ಇಷ್ಟೇ ಅಲ್ಲದೆ ನಿಮ್ಮ ಆಸ್ತಿಯ ಜಾಗ ಸರ್ಕಾರದ ವಶವಾಗಿದ್ದೇವೆಯೇ ಅಥವಾ ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ ಅಥವಾ ಒತ್ತುವರಿಯಾಗಿದೆಯೇ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು.ದಿಶಾಂಕ್ ಆ್ಯಪ್ ನೀಡುವ ಭೂಮಿಯ ವಿವರ ಕೇವಲ ಮಾಹಿತಿ ಆಗಿದೆ. ಇದನ್ನು ಕಾನೂನು ಬದ್ಧ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ. ದಿಶಾಂಕ್ ಆ್ಯಪ್ ಜಮೀನಿನ ಮಾಹಿತಿಗಾಗಿ ನವೀನ ಪರಿಹಾರ
ಕಂದಾಯ ಇಲಾಖೆ ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು 1960ರ ಸರ್ವೇ ನಕ್ಷೆಗಳ ಆಧಾರದ ಮೇಲೆ ದಿಶಾಂಕ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಬಳಸಿ, ಕ್ಷಣಗಳಲ್ಲಿ ಜಮೀನಿನ ಅಳತೆ ಮಾಡಬಹುದು.ಬೆಂಗಳೂರು ಮಾತ್ರವಲ್ಲ, ಕರ್ನಾಟಕದ ಎಲ್ಲಾ ಜಿಲ್ಲೆಗಳ ಭೂಮಾಪನ ಮಾಹಿತಿಯನ್ನು ಈ ಆ್ಯಪ್ ಒಳಗೊಂಡಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆ್ಯಪ್‌ನಿಂದ ನಿಮಗಾಗುವ ಅನುಕೂಲಗಳೇನು?
ಸ್ಥನೀವು ರಾಜ್ಯದ ಯಾವುದೇ ಭಾಗದಲ್ಲಿ ಭೂಮಿ ಖರೀದಿಸಲು ಹೋದಾಗ, ಆ ಜಾಗದಲ್ಲಿ ನಿಂತು ಆ್ಯಪ್ ಓಪನ್ ಮಾಡಿದರೆ ಸಾಕು. ಅದು ಆ ಜಾಗದ ಸರ್ವೆ ನಂಬರ್ ಮತ್ತು ನಕ್ಷೆಯನ್ನು ತಕ್ಷಣ ತೋರಿಸುತ್ತದೆ.
ನೀವು ಕೊಳ್ಳುತ್ತಿರುವ ಜಾಗ ರಾಜಕಾಲುವೆ, ಕೆರೆ ಅಥವಾ ಸರ್ಕಾರಿ ಗೋಮಾಳಕ್ಕೆ ಸೇರಿದೆಯೇ ಎಂಬುದು ಕ್ಷಣಾರ್ಧದಲ್ಲಿ ತಿಳಿಯಲಿದೆ.
ಯಾವುದೇ ಆಸ್ತಿ ವಿಲೇವಾರಿ ಅಥವಾ ಸರ್ವೆ ನಂಬರ್ ತಿಳಿದುಕೊಳ್ಳಲು ಇನ್ನು ಮುಂದೆ ಕಚೇರಿಗಳಿಗೆ ಅಲೆದಾಡಿ ಶ್ರಮ ಪಡಬೇಕಾಗಿಲ್ಲ.
ಕಂದಾಯ ಇಲಾಖೆಯ ಅಧಿಕೃತ ದತ್ತಾಂಶದ ಆಧಾರದ ಮೇಲೆ ಈ ಆ್ಯಪ್ ಕೆಲಸ ಮಾಡುವುದರಿಂದ, ಮಧ್ಯವರ್ತಿಗಳ ಹಾವಳಿ ಅಥವಾ ನಕಲಿ ನಕ್ಷೆಗಳ ಭಯ ನಿಮಗಿರುವುದಿಲ್ಲ.
ಆ್ಯಪ್ ಇನ್ಸ್ ಟಾಲ್ ಮಾಡಿಕೊಳ್ಳುವುದೇಗೆ ?
ಮೊಬೈಲ್ ನಲ್ಲಿ ದಿಶಾಂಕ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು https://play.google.com/store/apps/details?id=com.ksrsac.sslr&hl=en_IN ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಅಥವಾ ನಿಮ್ಮ ಮೊಬೈಲ್ ನಲ್ಲಿರುವ Google play store ನಲ್ಲಿ Dishank Survey app ಎಂದು ಟೈಪ್ ಮಾಡಿ ದಿಶಾಂಕ್ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕು.
ಅಪ್ಲಿಕೇಶನ್ ಉಪಯೋಗಿಸುವ ವಿಧಾನ :
ಮೊದಲಿಗೆ ನಿಮ್ಮ ಫೋನಿನಲ್ಲಿ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ಡಿಶಾಂಕ್ ಆಪ್ ಎಂದು ಟೈಪ್ ಮಾಡಿ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
ನಿಮ್ಮ ಮೊಬೈಲ್ ನಲ್ಲಿ ಓಪನ್ ಮಾಡಿಕೊಂಡ ನಂತರ ಇದಕ್ಕೆ ಅಕ್ಸೆಸ್ ಪರ್ಮಿಷನ್ ಕೊಡಬೇಕಾಗುತ್ತೆ.
ಅದಕ್ಕಾಗಿ ನೀವು ಹಲೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಮುಂದುವರೆದು ನೀವು ಅದರ ಭಾಷೆಯನ್ನು ಕೂಡ ಸೆಟ್ ಮಾಡಿಕೊಳ್ಳಬೇಕಾಗುತ್ತದೆ ಅದರಲ್ಲಿ ಎರಡು ಭಾಷೆಗಳಿರುತ್ತದೆ. ಕನ್ನಡ ಮತ್ತು ಇನ್ನೊಂದು ಇಂಗ್ಲಿಷ್. ನಾವು ಕನ್ನಡ ಎಂಬ ಭಾಷೆಯನ್ನು ಸೆಟ್ ಮಾಡಿಕೊಳ್ಳಬೇಕು.
ಹೋಂ ಪೇಜ್ ಓಪನ್ ಆಗುವುದು ಅದರಲ್ಲಿ ನೀವು ನಿಂತಿರುವಂತಹ ಸ್ಥಳ ಯಾರ ಹೆಸರಿನಲ್ಲಿದೆ,ಅದರ ಸರ್ವೇ ನಂಬರ್ ಎಷ್ಟು, ಅದಲ್ಲದೆ ನೀವು ಅದರ ವಿಸ್ತೀರ್ಣವನ್ನು ಕೂಡ ಅಳತೆ ಮಾಡಬಹುದು.
ಗೌರ್ಮೆಂಟ್ ಅಧಿಕಾರಿಗಳು ನಿಮ್ಮ ಜಾಗಕ್ಕೆ ಭೇಟಿ ನೀಡಿದಾಗಲೂ ಕೂಡ ಇದೇ ಅದನ್ನು ಬಳಸಿಕೊಂಡು ಸರ್ವೇಯನ್ನು ಮಾಡಲಾಗುತ್ತದೆ.
ಈ ಆಪ್ ನಲ್ಲಿ ಬಹಳಷ್ಟು ನಿಮ್ಮ ಬಲಭಾಗದಲ್ಲಿ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರಾಜ್ಯದ ಗಡಿಭಾಗ ಯಾವ ಬಣ್ಣದಲ್ಲಿದೆ ಹಾಗೂ ನಿಮ್ಮ ಜಿಲ್ಲೆ ಗಡಿ,ತಾಲೂಕು ಗಡಿ, ಹೋಬಳಿ ಗಡಿ, ಗ್ರಾಮ ಗಡಿ ಯಾವ ಬಣ್ಣದಲ್ಲಿದೆ ಎಂಬುದರ ಮಾಹಿತಿಯನ್ನು ತಿಳಿಸಿಕೊಡುತ್ತದೆ.
ಅಕ್ಕಪಕ್ಕದ ಸರ್ವೆ ನಂಬರ್ ಗಳಲ್ಲಿ ವಸತಿ ಇದೆಯೇ ಅಥವಾ ಬೆಟ್ಟಗಳಾಗಿರಬಹುದು ನದಿ, ಟ್ಯಾಂಕ್ ಅಥವಾ ಯಾವುದಾದರೂ ಸ್ಕೀಮ್ ಇದೆಯೇ ಎಂಬುದರ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಮತ್ತು ಅದರ ಕೆಳಗಿನ ಭಾಗದಲ್ಲಿ ನಿಮಗೆ ನಾಲ್ಕು ಆಪ್ಷನ್ ಗಳು ದೊರೆಯುತ್ತದೆ, ಒಂದು ಮಾಪನ ಸಾಧನಗಳು, ಸರ್ವೇ ನಂಬರ್ ಹುಡುಕಿ, ಸ್ಥಳದ ವರದಿ ಮತ್ತು ಮ್ಯಾಪ್ ಗಾಗಿ ಒತ್ತಿರಿ.

