HomeKarnatakaBIG NEWS: ಡಿನ್ನರ್ ಮೀಟಿಂಗ್ ರದ್ದಾಗಿಲ್ಲ; ಮುಂದೂಡಿಕೆಯಾಗಿದೆ: ಸಭೆ ಸಹಿಸದವರಿಗೆ ತಕ್ಕ ಉತ್ತರ ಎಂದ ಗೃಹ...

BIG NEWS: ಡಿನ್ನರ್ ಮೀಟಿಂಗ್ ರದ್ದಾಗಿಲ್ಲ; ಮುಂದೂಡಿಕೆಯಾಗಿದೆ: ಸಭೆ ಸಹಿಸದವರಿಗೆ ತಕ್ಕ ಉತ್ತರ ಎಂದ ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಏರ್ಪಡಿಸಲು ಮುಂದಾಗಿದ್ದ ಡಿನ್ನರ್ ಮೀಟಿಂಗ್ ಗೆ ಹೈಕಮಾಂಡ್ ಬ್ರೇಕ್ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಾ.ಜಿ.ಪರಮೇಶ್ವರ್, ಡಿನ್ನರ್ ಮೀಟಿಂಗ್ ರದ್ದಾಗಿಲ್ಲ, ಮುಂದೂಡಲಾಗಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಮ್ಮ ಸಭೆಯನ್ನು ಸಹಿಸುವುದಿಲ್ಲ ಎಂದು ಯಾರೂ ಹೇಳಿಲ್ಲ. ಸಭೆ ಮುಂದುದಲಾಗಿದೆ ಅಷ್ಟೇ. ಸಭೆ ನಡೆಸುತ್ತೇವೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಂಡ್ ಗೆ ಸಭೆ ಬಗ್ಗೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಸಭೆಗೆ ಡಿ.ಕೆ.ಶಿವಕುಮಾರ್ ಅವರನ್ನೂ ಕರೆಯುತ್ತೇವೆ. ರಾಜಕಾರಣ ಮಾಡುವುದಾದರೆ ಓಪನ್ ಆಗಿಯೇ ಮಾಡುತ್ತೇವೆ. ಮುಚ್ಚಿಟ್ಟು ಮಾಡುವಂಥದ್ದು ಏನೂ ಇಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular