HomeLatest Newsಡಯಟ್ ಮಾಡಿದ್ರೂ ತೂಕ ಇಳಿಯುತ್ತಿಲ್ಲವೇ? ಹಾಗಿದ್ರೆ ಈ 7 ಸೀಕ್ರೆಟ್ ಕಾರಣಗಳನ್ನು ತಿಳಿಯಿರಿ

ಡಯಟ್ ಮಾಡಿದ್ರೂ ತೂಕ ಇಳಿಯುತ್ತಿಲ್ಲವೇ? ಹಾಗಿದ್ರೆ ಈ 7 ಸೀಕ್ರೆಟ್ ಕಾರಣಗಳನ್ನು ತಿಳಿಯಿರಿ

ಬೆಂಗಳೂರು: ಎಷ್ಟೇ ವ್ಯಾಯಾಮ ಮಾಡಿದರೂ, ಊಟ ಕಡಿಮೆ ಮಾಡಿದರೂ ತೂಕ ಇಳಿಯುತ್ತಿಲ್ಲ ಎಂದು ಬೇಸರಗೊಂಡಿದ್ದೀರಾ? ವೇಯಿಂಗ್ ಸ್ಕೇಲ್ನಲ್ಲಿ ಮುಳ್ಳು ಒಂದೇ ಕಡೆ ನಿಂತುಬಿಟ್ಟಿದೆಯೇ? ಹಾಗಿದ್ದರೆ ನೀವು ಕೇವಲ ಕ್ಯಾಲೊರಿಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದೀರಿ ಎಂದರ್ಥ. ತೂಕ ಇಳಿಕೆ ಸ್ಥಗಿತಗೊಳ್ಳಲು (Weight Loss Plateau) ನಮ್ಮ ದೇಹದ ಒಳಗಿನ ಕೆಲವು ಗುಪ್ತ ಕಾರಣಗಳೇ ಹೊಣೆ ಎನ್ನುತ್ತಾರೆ ತಜ್ಞರು.

ಡಾ. ಥಾಮಸ್ ಪಾಲೋಸ್ಕಿ ಅವರ ಪ್ರಕಾರ ತೂಕ ಇಳಿಕೆಗೆ ಕೇವಲ ಜಿಮ್ ಅಷ್ಟೇ ಸಾಕಾಗಲ್ಲ. ಈ ಕೆಳಗಿನ ಅಂಶಗಳ ಮೇಲೆ ಗಮನವಿಡಿ:

ಜಿಮ್ ಹೊರಗಿನ ಚಟುವಟಿಕೆ: ನೀವು ಜಿಮ್‌ನಲ್ಲಿ ಒಂದು ಗಂಟೆ ಬೆವರಿಸಿದರೂ, ಉಳಿದ ಸಮಯದಲ್ಲಿ ಸೋಫಾ ಮೇಲೆ ಕುಳಿತಿದ್ದರೆ ಪ್ರಯೋಜನವಿಲ್ಲ. ಮನೆಯ ಸಣ್ಣಪುಟ್ಟ ಕೆಲಸ, ಓಡಾಟ ಕಡಿಮೆಯಾದರೆ ತೂಕ ಇಳಿಕೆ ನಿಧಾನವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿದ್ರೆ ಎಂಬ ಮ್ಯಾಜಿಕ್: ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ದೇಹಕ್ಕೆ ಹೆಚ್ಚು ಹಸಿವಾಗುತ್ತದೆ. ನಿದ್ರೆಯಿಲ್ಲದ ವ್ಯಕ್ತಿ ದಿನಕ್ಕೆ ಸುಮಾರು 300 ಕ್ಯಾಲೊರಿ ಅಧಿಕ ಆಹಾರ ಸೇವಿಸುತ್ತಾನೆ ಎಂದು ಸಂಶೋಧನೆ ಹೇಳುತ್ತದೆ.

ಪ್ಯಾಕೆಟ್ ಫುಡ್ ಗೆ ನೋ ಅನ್ನಿ: ಈ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳು ನಿಮ್ಮ ಮೆಟಬಾಲಿಸಂ ಅನ್ನು ಹಾಳುಮಾಡುತ್ತವೆ. ಇವುಗಳ ಸೇವನೆಯಿಂದ ದಿನಕ್ಕೆ ಸುಮಾರು 500 ಕ್ಯಾಲೊರಿ ಅಧಿಕವಾಗಿ ದೇಹ ಸೇರಬಹುದು.

https://www.instagram.com/p/DWyp68zCObX/?utm_source=ig_web_copy_link&igsh=NTc4MTIwNjQ2YQ==

ಇನ್ಸುಲಿನ್ ಮತ್ತು ಹಾರ್ಮೋನ್ ಆಟ: ಇನ್ಸುಲಿನ್ ಪ್ರತಿರೋಧ ಅಥವಾ ಮಹಿಳೆಯರಲ್ಲಿ ಕಾಡುವ PCOS ಮತ್ತು ಋತುಬಂಧದ (Menopause) ಬದಲಾವಣೆಗಳು ಹೊಟ್ಟೆಯ ಭಾಗದಲ್ಲಿ ಕೊಬ್ಬು ಕರಗದಂತೆ ತಡೆಯುತ್ತವೆ.

ಔಷಧಿಗಳ ಸೈಡ್ ಎಫೆಕ್ಟ್: ನೀವು ಬಳಸುವ ಬಿಪಿ ಮಾತ್ರೆಗಳು ಅಥವಾ ಖಿನ್ನತೆ-ನಿರೋಧಕ ಔಷಧಿಗಳು ಸಹ ತೂಕ ಇಳಿಕೆಗೆ ಅಡ್ಡಿಪಡಿಸುತ್ತಿರಬಹುದು.

ಜೀವಕೋಶಗಳ ಶಕ್ತಿ: ನಮ್ಮ ಜೀವಕೋಶದ ಮೈಟೊಕಾಂಡ್ರಿಯ ಸರಿಯಾಗಿ ಕೆಲಸ ಮಾಡದಿದ್ದರೆ ಶಕ್ತಿ ಉತ್ಪಾದನೆ ಕುಂಠಿತವಾಗಿ ತೂಕ ಇಳಿಯುವುದು ನಿಂತುಹೋಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular