HomeLatest Newsಹೊಸ ದಾಖಲೆ ಬರೆದ 'ಧುರಂಧರ್ 2' ಸಿನಿಮಾ ; ಒಂದೇ ವಾರದಲ್ಲಿ 1000 ಕೋಟಿ ಕ್ಲಬ್...

ಹೊಸ ದಾಖಲೆ ಬರೆದ ‘ಧುರಂಧರ್ 2’ ಸಿನಿಮಾ ; ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರ್ಪಡೆ.!

ಬೆಂಗಳೂರು: ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಸುನಾಮಿ ಎಬ್ಬಿಸಿದೆ. ವರದಿಯ ಪ್ರಕಾರ, ಈ ಸಿನಿಮಾ ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ (7 ದಿನಗಳಲ್ಲಿ) ವಿಶ್ವಾದ್ಯಂತ 1,006 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.

2026ರಲ್ಲಿ ಬಿಡುಗಡೆಯಾಗಿ 1000 ಕೋಟಿ ರೂಪಾಯಿ ಗಡಿ ದಾಟಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ವಿಶೇಷವೆಂದರೆ, ಕರ್ನಾಟಕದಲ್ಲಿ ಈ ಚಿತ್ರವು ಮೊದಲ ವಾರದಲ್ಲೇ 73 ಕೋಟಿ ರೂ. ಗಳಿಸುವ ಮೂಲಕ ಪರಭಾಷಾ ಚಿತ್ರಗಳ ಪೈಕಿ ದೊಡ್ಡ ದಾಖಲೆ ಬರೆದಿದೆ.

ದಾಖಲೆಗಳ ಉಡೀಸ್: ಅತಿ ಕಡಿಮೆ ಅವಧಿಯಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದ ಭಾರತದ ಎರಡನೇ ಚಿತ್ರ ಇದಾಗಿದೆ. (ಪುಷ್ಪಾ 2 ಮೊದಲ ಸ್ಥಾನದಲ್ಲಿದೆ – 6 ದಿನಗಳು).ಈ ಸಾಧನೆಯ ಮೂಲಕ ‘ಧುರಂಧರ್ 2’ ಚಿತ್ರವು ಬಾಹುಬಲಿ 2 (9 ದಿನಗಳು), ಆರ್‌ಆರ್‌ಆರ್, ಕೆಜಿಎಫ್ 2 ಮತ್ತು ಕಲ್ಕಿ 2898 ಎಡಿ ಸಿನಿಮಾಗಳ ದಾಖಲೆಗಳನ್ನು ಪುಡಿಪುಡಿ ಮಾಡಿದೆ.ರಣವೀರ್ ಸಿಂಗ್ ಅವರೊಂದಿಗೆ ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಂಜಯ್ ದತ್ ಅವರಂತಹ ದಿಗ್ಗಜ ನಟರ ಅಭಿನಯ ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಣ್ಣ ಪ್ರಶಂಸೆ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಆದಿತ್ಯ ಧರ್, ಶಿವಣ್ಣ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಈ ಚಿತ್ರವು ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಪಂಚಭಾಷೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಹೆಚ್ಚಿನ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular