HomeKarnatakaಏಪ್ರಿಲ್ 9ರ ಚುನಾವಣೆ: 2,140 ಅಭ್ಯರ್ಥಿಗಳು ಕಣದಲ್ಲಿ

ಏಪ್ರಿಲ್ 9ರ ಚುನಾವಣೆ: 2,140 ಅಭ್ಯರ್ಥಿಗಳು ಕಣದಲ್ಲಿ

ಏಪ್ರಿಲ್ 9ರಂದು ಕೇರಳ, ಪುದುಚೇರಿ, ಅಸ್ಸಾಂ, ಕರ್ನಾಟಕ 2 ಕ್ಷೇತ್ರಗಳು ಸೇರಿ 5 ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಗುರುವಾರ ಕೊನೆಯ ದಿನವಾಗಿತ್ತು. ಚುನಾವಣಾ ಕಣ ಅಂತಿಮವಾಗಿದ್ದು, ಒಟ್ಟು 2,140 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅಸ್ಸಾಂನ 126, ಕೇರಳದ 140, ಪುದುಚೇರಿಯ 30 ಸೇರಿ ಒಟ್ಟು 296 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಗೋವಾ 1, ಕರ್ನಾಟಕ 2, ನಾಗಾಲ್ಯಾಂಡ್ 1, ತ್ರಿಪುರ 1 ಸೇರಿ 5 ಕ್ಷೇತ್ರಗಳಿಗೂ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಅಭ್ಯರ್ಥಿಗಳ ಸಂಖ್ಯೆ: ಅಸ್ಸಾಂನಲ್ಲಿ 126 ಕ್ಷೇತ್ರಗಳಲ್ಲಿ 789. ಕೇರಳದ 140 ಕ್ಷೇತ್ರಗಳಲ್ಲಿ 985. ಪುದುಚೇರಿಯ 30 ಕ್ಷೇತ್ರಗಳಲ್ಲಿ 366 ಸೇರಿ ಒಟ್ಟು 2,140 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೋವಾದ 1 ಕ್ಷೇತ್ರದಲ್ಲಿ 3, ಕರ್ನಾಟಕದ 2 ಕ್ಷೇತ್ರದಲ್ಲಿ 50, ನಾಗಾಲ್ಯಾಂಡ್ 1 ಕ್ಷೇತ್ರದಲ್ಲಿ 7, ತ್ರಿಪುರದ 1 ಕ್ಷೇತ್ರದಲ್ಲಿ 6 ಸೇರಿ ಒಟ್ಟು 66 ಅಭ್ಯರ್ಥಿಗಳು ಉಪ ಚುನಾವಣೆ ಕಣದಲ್ಲಿದ್ದಾರೆ. ಎಲ್ಲರ ಭವಿಷ್ಯ ಏಪ್ರಿಲ್ 9ರಂದು ಮತಪೆಟ್ಟಿಗೆ ಸೇರಲಿದ್ದು, ಮೇ 4ರ ತನಕ ಫಲಿತಾಂಶಕ್ಕಾಗಿ ಕಾಯಬೇಕಿದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತದಲ್ಲಿ ಮತ್ತು ತಮಿಳುನಾಡು ರಾಜ್ಯದ ವಿಧಾನಸಭೆ ಚುನಾವಣೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ನಡೆಯಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular