HomeEntertainment'ಧ್ರುವತಾರೆ' ಚಿತ್ರದ ಟ್ರೈಲರ್ ರಿಲೀಸ್

‘ಧ್ರುವತಾರೆ’ ಚಿತ್ರದ ಟ್ರೈಲರ್ ರಿಲೀಸ್

ಪ್ರತೀಕ್ ಹಾಗೂ ಅವರ ಪತ್ನಿ ಮೌಲ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಧ್ರುವತಾರೆ’ ಚಿತ್ರದ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ನೋಡುಗರ ಗಮನ ಸೆಳೆದಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.

ನಟ ಪ್ರತೀಕ್ ಅವರೇ ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಸಂಕಲನ ಹಾಗೂ  ಸಂಭಾಷಣೆಯ ಜವಾಬ್ದಾರಿ  ಹೊತ್ತಿದ್ದು, ಜಿಪಿ ಫಿಲಂ ಸ್ಟುಡಿಯೋ  ಸಂಸ್ಥೆ ಹಾಗೂ ಶಿವರುದ್ರಪ್ಪ ನಿರ್ಮಾಣ ಮಾಡಿದ್ದಾರೆ. ಪ್ರತೀಕ್ ಮತ್ತು ಮೌಲ್ಯ ಸೇರಿದಂತೆ ಕಾರ್ತಿಕ್ ಮಹೇಶ್, ಅಶ್ವಿನ್ ರಾವ್ ಪಲ್ಲಕ್ಕಿ, ರಮೇಶ್ ಭಟ್, ಮೂಗ್ ಸುರೇಶ್, ಪಿಡಿ ಸತೀಶ್ ಚಂದ್ರ, ಪ್ರಭಾವತಿ, ಸಮಯ್, ಸಂಗೀತ ನಾರಾಯಣ್ ತೆರೆ ಹಂಚಿಕೊಂಡಿದ್ದಾರೆ. ಸೋನು ಗೌಡ ವೇಶಭೂಷಣ ಮತ್ತು ಜೀಚನ್ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular