ಧಾರವಾಡ : ಧಾರವಾಡ ಜಿಲ್ಲೆಯ ಎಲ್ಲಾ ರೈತರು ತೋಟಗಾರಿಕೆ ಬೆಳೆಯ ಬಗ್ಗೆ ಬರಗಾಲ ನಿರ್ವಹಣೆಯನ್ನು ನೀಗಿಸಲು ತೋಟಗಾರಿಕೆ ಇಲಾಖೆಯಿಂದ ವಿಡಿಯೋ ಸಂವಾದವನ್ನು ಅಗಸ್ಟ್ 25, 2026 ರಂದು ಬೆಳಿಗ್ಗೆ 10:30 ಗಂಟೆಗೆ ಆಯೋಜಿಸಲಾಗಿದೆ.
ಸದರಿ ಸಭೆಗೆ https://calendar.app.google/VsdUkdcZiK9PYFNt5 ಲಿಂಕ್ ನ್ನು ಉಪಯೋಗಿಸಿಕೊಂಡು ಭಾಗವಹಿಸಿ ಜಿಲ್ಲೆಯ ಎಲ್ಲಾ ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರ ಬೆಳೆ ಸಮೀಕ್ಷೆ
ಧಾರವಾಡ : ರೈತರ ಬೆಳೆ ಸಮೀಕ್ಷೆಯ ಡೇಟಾ ಹಾಗೂ ಬೆಳೆ ವಿಮೆ ಅರ್ಜಿಯ ಮಾಹಿತಿ ಹೊಂದಾಣಿಕೆಯಾಗದಿದ್ದರೆ ವಿಮೆ ಪರಿಹಾರ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಕೃಷಿ ಇಲಾಖೆಯ ಇತರೆ ಸವಲತ್ತುಗಳು, ಬೆಂಬಲ ಬೆಲೆ ಯೋಜನೆ ಹಾಗೂ ಪರಿಹಾರ ಪಡೆಯಲು ಸಮೀಕ್ಷೆಯೇ ಆಧಾರವಾಗಿರುತ್ತದೆ. ರೈತರ ಪಹಣಿ ಪತ್ರಿಕೆಯಲ್ಲಿ ರೈತರು ಬೆಳೆದ ನಿಖರ ಬೆಳೆ ವಿವರಗಳನ್ನು ಅಧಿಕೃತವಾಗಿ ದಾಖಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಗಸ್ಟ್ 23, 2026 ರೊಳಗಾಗಿ ಬೆಳೆಗಳ ಮರು ಸಮೀಕ್ಷೆ ಮಾಡಲಾಗುವುದು. ಅಗಸ್ಟ್ 25, 2026 ರೊಳಗಾಗಿ ಮರು ಸಮೀಕ್ಷೆ ಮಾಹಿತಿಯ ಮೇಲ್ವಿಚಾರಕರ ಪರಿಶೀಲನೆ ಮಾಡುವರು. ಅಗಸ್ಟ್ 28, 2026 ರೊಳಗಾಗಿ ಸಮೀಕ್ಷೆ ಆಗದೇ ಇರುವ ತಾಕುಗಳಿಗೆ ಮಾತ್ರ ರೈತರ ಆಕ್ಷೇಪಣೆ ಸಲ್ಲಿಸಬಹುದು. ಅಗಸ್ಟ್ 31, 2026 ರೊಳಗಾಗಿ ರೈತರ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು. ತದನಂತರ ಯಾವುದೇ ವಿಸ್ತರಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಳೆ ಸಮೀಕ್ಷೆ ವಿವರಗಳನ್ನು ಪರಿಶೀಲಿಸುವ ವಿಧಾನ: ರೈತರು ತಮ್ಮ ಸರ್ವೇ ನಂಬರ್ಗೆ ಬೆಳೆ ಸಮೀಕ್ಷೆ ದಾಖಲಾಗಿರುವುದನ್ನು ಮತ್ತು ಅದರ ಸ್ಥಿತಿಯನ್ನು ಕರ್ನಾಟಕ ಸರ್ಕಾರದ ಅಧಿಕೃತ “ಬೆಳೆ ದರ್ಶಕ” ಮೊಬೈಲ್ ಆ್ಯಪ್ನ್ನು ಪ್ಲೇಸ್ಟೋರ್ನಿಂದ ಡೌನಲೋಡ್ ಮಾಡಿಕೊಳ್ಳಬೇಕು. 2026-27 ಮತ್ತು ಹಂಗಾಮನ್ನು ಪೂರ್ವ ಮುಂಗಾರು ಎಂದು ಆಯ್ಕೆ ಮಾಡಬೇಕು. ಧಾರವಾಡ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೇ ನಂಬರ್ ಅನ್ನು ನಮೂದಿಸಬೇಕು. ರೈತರ ಬೆಳೆ ವಿವರಗಳು ಹಾಗೂ ಫೆÇೀಟೋಗಳು ಸರಿಯಾಗಿ ಅಪೆÇ್ಲೀಡ್ ಆಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಬೆಳೆ ಸಮೀಕ್ಷೆ ವಿವರ ತಪ್ಪಾಗಿದ್ದರೆ, ತಕ್ಷಣವೇ ಬೆಳೆ ದರ್ಶಕ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ರೈತರ ಗುರುತಿನ ಸಂಖ್ಯೆ : ಧಾರವಾಡ ಜಿಲ್ಲೆಯ ರೈತರು ಸರ್ಕಾರದ ವಿವಿಧ ಸವಲತ್ತುಗಳು, ಬರ ಪರಿಹಾರ ಮತ್ತು ಸಬ್ಸಿಡಿಗಳನ್ನು ಪಡೆಯಲು ರೈತರು ತಮ್ಮ ಪ್ರತಿವೊಂದು ಸರ್ವೆ ನಂಬರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ ರೈತರ ಗುರುತಿನ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ.
ರೈತರು ಎಫ್ಐಡಿ ನೋಂದಣಿ ಮಾಡಿಸಲು ಆಧಾರ್ ಕಾರ್ಡ್ ನಕಲು ಪ್ರತಿ, ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ, ಜಮೀನಿನ ಸರ್ವೇ ನಂಬರ್, ಹಿಸ್ಸಾ ನಂಬರ್ ಒಳಗೊಂಡ ಭೂ ದಾಖಲೆ (ಪಹಣಿ ಪತ್ರಿಕೆ), ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ, ಪಾಸ್ಪೆÇೀರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಾಗಿದ್ದರೆ ಸಬ್ಸಿಡಿ ಸವಲತ್ತುಗಳಿಗಾಗಿ ಸಲ್ಲಿಸಬೇಕು, ಕುಟುಂಬದ ರೇಷನ್ ಕಾರ್ಡ್ (ಪಡಿತರ ಚೀಟಿ) ಪ್ರತಿ ಅವಶಕವಾಗಿರುತ್ತವೆ.
ರೈತರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇμÉ್ಮ ಅಥವಾ ಪಶುಸಂಗೋಪನಾ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಎಫ್ಐಡಿ ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

