HomeLatest NewsBREAKING : ಧರ್ಮಸ್ಥಳ ಕೇಸ್ : 6 ನೇ ಪಾಯಿಂಟ್ ನಲ್ಲಿ ಸಿಕ್ಕಿದ್ದು ಪುರುಷನ ಮೂಳೆ,...

BREAKING : ಧರ್ಮಸ್ಥಳ ಕೇಸ್ : 6 ನೇ ಪಾಯಿಂಟ್ ನಲ್ಲಿ ಸಿಕ್ಕಿದ್ದು ಪುರುಷನ ಮೂಳೆ, ಮುಂದುವರೆದ ಶೋಧ.!

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಸಮಾಧಿ ಅಗೆಯುವ ಪ್ರಕ್ರಿಯೆ ನಡೆಸುತ್ತಿದ್ದು, 6 ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ.

ಸಿಕ್ಕಿರುವ ಕೈ ಭಾಗದ 2 ಮೂಳೆಗಳು ಪುರುಷನದ್ದು ಎಂದು ಎಸ್ ಐ ಟಿ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ. ಸದ್ಯ, ಮೂಳೆ ಸಿಕ್ಕ ಜಾಗದಲ್ಲಿ ಸುತ್ತಲೂ ಪರದೆ ಹಾಕಿ ಶೋಧಕಾರ್ಯ ಮುಂದುವರೆಸಲಾಗಿದೆ. ಹಿಟಾಚಿ ಬಳಸಿ ಎಸ್ ಐ ಟಿ ಶೋಧ ಕಾರ್ಯ ನಡೆಸುತ್ತಿದೆ.ಇಂದು ಸಂಜೆ 6 ಗಂಟೆವರೆಗೂ ಎಸ್ ಐ ಟಿ ತಂಡ ಶೋಧ ಕಾರ್ಯ ನಡೆಸಲಿದ್ದಾರೆ.

ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಎಸ್ ಐ ಟಿ ಗೆ ಮತ್ತೆ 9 ಮಂದಿ ಪೊಲೀಸ್ ಅಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಮೃತದೇಹಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಉನ್ನತ ಅಧಿಕಾರಿಗಳನ್ನು ನೇಮಕ ಮಾಡಿದ ಬಳಿಕ 20 ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇದೀಗ ಮತ್ತೆ 9 ಮಂದಿ ಪೊಲೀಸರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್ಐ ಲಾರೆನ್ಸ್ ಸೆನ್ ಪೊಲೀಸ್ ಠಾಣೆಯ ಹೆಚ್.ಸಿ ಪುನೀತ್, ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೆಚ್.ಸಿ ಮನೋಹರ, ವಿಟ್ಲ ಪೊಲೀಸ್ ಠಾಣೆಯ ಪಿ.ಸಿ ಮನೋಜ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಸಿ ಸಂದೀಪ್, ಉಡುಪಿ ಸಿ.ಎಸ್.ಪಿ ಪೊಲೀಸ್ ಠಾಣೆಯ ಪಿ.ಸಿ ಲೋಕೇಶ್, ಹೊನ್ನಾವರ ಪೊಲೀಸ್ ಠಾಣೆಯ ಹೆಚ್.ಸಿ ಸತೀಶ್ ನಾಯ್ಕ ಮಂಗಳೂರು ಎಫ್.ಎಮ್.ಎಸ್ ದಳದ ಹೆಚ್.ಸಿ ಜಯರಾಮೇಗೌಡ ಮತ್ತು ಹೆಚ್.ಸಿ ಬಾಲಕೃಷ್ಣ ಗೌಡ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಎಸ್.ಐ.ಟಿ ಸಂಸ್ಥೆಗೆ ವರದಿ ಮಾಡಿಕೊಳ್ಳಲು ಡಿಜಿ&ಐಜಿಪಿ ಡಾ.ಎಂ.ಎ ಸಲೀಂ ಆದೇಶ ಹೊರಡಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular