HomeLatest NewsBREAKING: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: 13 ಪಾಯಿಂಟ್ ಗಳಿಗೂ ಖಾಕಿ ಬಿಗಿ ಭದ್ರತೆ: ಗನ್...

BREAKING: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: 13 ಪಾಯಿಂಟ್ ಗಳಿಗೂ ಖಾಕಿ ಬಿಗಿ ಭದ್ರತೆ: ಗನ್ ಮ್ಯಾನ್ ಗಳ ನಿಯೋಜನೆ

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಶೋಧ ಕಾರ್ಯ ಚುರುಕುಗೊಳಿಸಿದೆ. ಈ ನಡುವೆ ಶವಗಳನ್ನು ಹೂಟಿಟ್ಟಿದ್ದಾಗಿ ದೂರುದಾರ ಹೇಳಿರುವ ಜಾಗದ ಬಳಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ದೂರುದಾರ ಒಟ್ಟು 13 ಸ್ಥಳಗಳಲ್ಲಿ ಶವಗಳನ್ನು ಹೂತುಹಾಕಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಈಗಾಗಲೇ ಎಸ್ ಐಟಿ ತಂಡ 10 ಸ್ಥಳಗಳಲ್ಲಿ ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯ ನಡೆಸಿದೆ. ಇನ್ನುಳಿದ ಮೂರು ಸ್ಥಳಗಳಲ್ಲಿ ನಾಳೆ ಸೋಮವಾರ ಶೋಧಕಾರ್ಯ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನಡುವೆ ಎಸ್ ಐಟಿ ತಂಡ 13 ಪಾಯಿಂಟ್ ಗಳಲ್ಲಿಯೂ ಭದ್ರತೆಗಾಗಿ ಪೊಲೀಸರನ್ನು ನೇಮಕ ಮಾಡಿದೆ. ಆಯಾ ಸ್ಥಳಗಳಲ್ಲಿ ಇಬ್ಬರು ಗನ್ ಮ್ಯಾನ್ ಗಳನ್ನು ನಿಯೋಜನೆ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular