ಅಕ್ರಮ ಪಿಸ್ತೂಲ್ ಬಳಸಿ ಹುಟ್ಟುಹಬ್ಬದ ವೇಳೆ ಕೇಕ್ ಕಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ದೆಹಲಿಯ ನೆಬ್ ಸರೈ ಎಂಬಲ್ಲಿ ಈ ಘಟನೆ ವರದಿಯಾಗಿದೆ. ಪೊಲೀಸರ ಪ್ರಕಾರ ಕಂಟ್ರಿ ಮೇಡ್ ಪಿಸ್ತೂಲ್ ಮತ್ತು 2 ಕಾರ್ಟ್ರಿಡ್ಜ್ ಗಳೊಂದಿಗೆ ವೀಡಿಯೊ ವೈರಲ್ ಆದ ನಂತರ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
21 ವರ್ಷದ ಆರೋಪಿಯನ್ನ ಸಂಗಮ್ ವಿಹಾರದ ಅನಿಕೇತ್ ಅಲಿಯಾಸ್ ಅನೀಶ್ ಎಂದು ಗುರುತಿಸಲಾಗಿದೆ. ಅನಿಕೇತ್ ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿತ್ತು. ವೀಡಿಯೊದಲ್ಲಿ ವ್ಯಕ್ತಿಯು ಪಿಸ್ತೂಲ್ ನಿಂದ ಕೇಕ್ ಕಟ್ ಮಾಡುತ್ತಿದ್ದು ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸಲಾಗಿದೆ.
ದೆಹಲಿ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವೈರಲ್ ಆಗಿರುವ ವಿಡಿಯೋ ಜೊತೆಗೆ ಬಂಧನಕ್ಕೊಳಗಾದ ವ್ಯಕ್ತಿಯ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಆರೋಪಿಯ ಮೇಲೆ ಈ ಹಿಂದೆ ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Taking cognizance of a viral video on social media wherein a young man was cutting cake with a pistol, #DelhiPolice identified the accused and arrested him from Neb Sarai along with .315 bore countrymade pistol & 2 live rounds. Case registered u/s 25 Arms Act. pic.twitter.com/CuBG65nvCP
— Delhi Police (@DelhiPolice) April 1, 2023

