HomeLatest NewsBREAKING : ದೆಹಲಿ ಮದ್ಯ ನೀತಿ ಪ್ರಕರಣ : ಕೇಜ್ರಿವಾಲ್, ಕೆ. ಕವಿತಾ ಸೇರಿ...

BREAKING : ದೆಹಲಿ ಮದ್ಯ ನೀತಿ ಪ್ರಕರಣ : ಕೇಜ್ರಿವಾಲ್, ಕೆ. ಕವಿತಾ ಸೇರಿ 23 ಮಂದಿಗೆ ಕೋರ್ಟ್ ಕ್ಲೀನ್ ಚಿಟ್.!

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಪ್ರಮುಖ ತೀರ್ಪು ನೀಡಿದೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ತೆಲಂಗಾಣ ಜಾಗೃತಿ ಅಧ್ಯಕ್ಷೆ ಕೆ. ಕವಿತಾ ಅವರಿಗೆ ನ್ಯಾಯಾಲಯವು ಕ್ಲೀನ್ ಚಿಟ್ ನೀಡಿದೆ. ಇವರ ವಿರುದ್ಧ ಸಿಬಿಐ (CBI) ದಾಖಲಿಸಿದ್ದ ಎಲ್ಲಾ ಆರೋಪಗಳನ್ನು ನ್ಯಾಯಾಲಯವು ವಜಾಗೊಳಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಿತೇಂದರ್ ಸಿಂಗ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕವಿತಾ ಸೇರಿದಂತೆ ಈ ಪ್ರಕರಣದ ಎಲ್ಲಾ 23 ಆರೋಪಿಗಳು ತಪ್ಪು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಆಮ್ ಆದ್ಮಿ ಪಕ್ಷಕ್ಕೆ (AAP) ದೊಡ್ಡ ಸಮಾಧಾನ:

ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ಮಾರಾಟಕ್ಕೆ ಹೊಸ ನೀತಿಯನ್ನು ರೂಪಿಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಪ್ರಕರಣದಲ್ಲಿ ನ್ಯಾಯಾಲಯದ ಈ ತೀರ್ಪು ಎಎಪಿ ಪಕ್ಷಕ್ಕೆ ದೊಡ್ಡ ಮಟ್ಟದ ಉಪಶಮನ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಜ್ರಿವಾಲ್ ಭಾವುಕ ನುಡಿ:

ತೀರ್ಪಿನ ನಂತರ ಸೆಂಟ್ರಲ್ ದೆಹಲಿಯ ನ್ಯಾಯಾಲಯದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್ ತೀವ್ರ ಭಾವುಕರಾದರು. “ಸತ್ಯಕ್ಕೆ ಕೊನೆಗೂ ಜಯ ಸಿಗುತ್ತದೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಸತ್ಯ ನಮ್ಮ ಪರವಾಗಿದೆ. ನಮ್ಮನ್ನು ಮನೆಯಿಂದ ಹೊರಗೆ ಎಳೆದು ಜೈಲಿಗೆ ಹಾಕಿದರು, ನಮ್ಮ ಮೇಲೆ ಬುರದೆರಚಿದರು,” ಎಂದು ಅವರು ಕಣ್ಣೀರಿಟ್ಟರು.

https://twitter.com/i/status/2027257046748573906

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular