HomeIndiaನ್ಯಾಯಾಲಯದ ಮೆಟ್ಟಿಲೇರಿದ ಎರಡು ಕುಟುಂಬಗಳ ಜಗಳ; ವಿಶಿಷ್ಟ ತೀರ್ಪು ಪ್ರಕಟಿಸಿದ ಕೋರ್ಟ್

ನ್ಯಾಯಾಲಯದ ಮೆಟ್ಟಿಲೇರಿದ ಎರಡು ಕುಟುಂಬಗಳ ಜಗಳ; ವಿಶಿಷ್ಟ ತೀರ್ಪು ಪ್ರಕಟಿಸಿದ ಕೋರ್ಟ್

ನವದೆಹಲಿ: ಎರಡು ಕುಟುಂಬಗಳ ನಡುವಿನ ಜಗಳ ಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್ ವಿಶಿಷ್ಟವಾದ ತೀರ್ಪು ಪ್ರಕಟಿಸಿದೆ.

ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಜಗಳ ಆರಂಭವಾಗಿ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಕುಟುಂಬಗಳಿಗೆ ತಲಾ 200 ಗಿಡಗಳನ್ನು ನೆಟ್ಟು 5 ವರ್ಷಗಳ ಕಾಲ ಅವುಗಳನ್ನು ಪೋಷಣೆ ಮಾಡುವಂತೆ ತೀರ್ಪು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಕೀಯ ಪಕ್ಷಗಳ ಯೋಜನೆಯಡಿ ಕಂಬಳಿ ವಿತರಣೆ ಮಾಡಿದ್ದ ವಿಚಾರವಾಗಿ ಕಂಬಳಿ ಪಡೆಯಲು ಎರಡು ಕುಟುಂಬಗಳ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿತ್ತು. ಪರಸ್ಪರ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. 6 ವರ್ಷಗಳ ಹಿಂದೆ ನಡೆದಿದ್ದ ಈ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಎರಡೂ ಕುಟುಂಬಗಳ ವಕೀಲರ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಈ ಪ್ರಕರಣ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದಾಗಿದ್ದು, ಎರಡೂ ಕುಟುಂಬಗಳ ಸದಸ್ಯರು ತಮ್ಮ ತಮ್ಮ ಪ್ರದೇಶದಲ್ಲಿ ತಲಾ 200 ಸಸಿಯಂತೆ ಒಟ್ಟು 400 ಸಸಿಗಳನ್ನು ನೆಟ್ಟು ನಕಾರಾತ್ಮಕತೆಯನ್ನು ಕೊನೆಗಾಣಿಸಬೇಕು. ಹೀಗೆ ನೆಟ್ಟ ಗಿಡಗಳನ್ನು 5 ವರ್ಷಗಳ ಕಾಲ ಪೋಷಣೆ ಮಾದಬೇಕು ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ನೇತೃತ್ವದ ಪೀಠ ತೀರ್ಪು ನೀಡಿದೆ.

 

For Latest News Updates, Join Our Whatsapp Community🚩
RELATED ARTICLES

Most Popular