ನವದೆಹಲಿ: ಅಪ್ರಾಪ್ತ ಬಾಲಕಿಯನ್ನು ಹೊತ್ತೊಯ್ದು ಆಕೆಗೆ ಬಲವಂತದಿಂದ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
ದೆಹಲಿಯ ಹೊರವಲಯದ ಸಮಯಪುರ್ ಬದ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. ಬಾಲಕಿ ಹಾಗೂ ಆಕೆಯ ಕುಟುಂಬಕ್ಕೆ ಪರಿಚಿತರೇ ಆಗಿದ್ದ ಆರೋಪಿಗಳಿಂದ ಈ ಕೃತ್ಯ ನಡೆದಿದೆ. ಬಾಲಕಿಯನ್ನು ಕರೆದೊಯ್ದು ಬಲವಂತದಿಂದ ಮದ್ಯ ಕುಡಿಸಿ ಗ್ಯಾಂಗ್ ರೇಪ್ ನಡೆಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಕಾಮುಕರನ್ನು ಬಂಧಿಸಲಾಗಿದೆ. ನರೋತ್ತಮ್ ಅಲಿಯಾಸ್ ನೇತಾ (28) ಹಾಗೂ ರಿಷಬ್ ಝಾ (26) ಬಂಧಿತ ಆರೋಪಿಗಳು. ನರೋತ್ತಮ್ ಕ್ಷೌರಿಕ ಅಂಗಡಿ ನಡೆಸುತ್ತಿದ್ದ. ರಿಷಬ್ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

