HomeLatest NewsBIG NEWS: ಖಾಸಗಿ ಕಾರಿಗೆ 'ಪೊಲೀಸ್' ನಾಮಫಲಕ: ASIಗೆ ದಂಡ ವಿಧಿಸಿದ ಸ್ಥಳೀಯ ಪೊಲೀಸರು

BIG NEWS: ಖಾಸಗಿ ಕಾರಿಗೆ ‘ಪೊಲೀಸ್’ ನಾಮಫಲಕ: ASIಗೆ ದಂಡ ವಿಧಿಸಿದ ಸ್ಥಳೀಯ ಪೊಲೀಸರು

ಚಿಕ್ಕಮಗಳೂರು: ಪೊಲೀಸ್ ಅಧಿಕಾರಿಯೊಬ್ಬ ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಪ್ರವಾಸ ತೆರಳಿದ್ದ ವೇಳೆ ಖಾಸಗಿ ಕಾರಿಗೆ ಪೊಲೀಸ್ ಎಂದು ನಾಮಫಲಕ ಹಾಕಿಕೊಂಡು ತೆರಳಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ದಂಡ ವಿಧಿಸಿರುವ ಘಟನೆ ನಡೆದಿದೆ.

ಧಾರವಾಡ ಮೂಲದ ಎಎಸ್ಐ ತನ್ನ ಕುಟುಂಬದ ಜೊತೆ ತನ್ನದೇ ಸ್ವಂತ ಕಾರಿನಲ್ಲಿ ಪ್ರವಾಸಕ್ಕೆ ಹೋಗುವಾಗ ತನ್ನ ಕಾರಿಗೆ ಪೊಲೀಸ್ ನಾಮಫಲಕ ಅಳವಡಿಸಿಕೊಂಡಿದ್ದಾರೆ. ಚಿಕ್ಕಮಗಳೂರಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಸ್ಥಳೀಯ ಪೊಲೀಸರು ವಾಹನ ತಪಾಸಣೆ ವೇಳೆ ಇದನ್ನು ಗಮನಿಸಿದ್ದಾರೆ. ಪೊಲೀಸ್ ಅಧಿಕಾರಿ ಧಾರವಾಡದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಟ್ಟಿಗೆಹಾರದ ಬಳಿ ವಾಹನ ತಪಾಸಣೆ ವೇಳೆ ಬಣಕಲ್ ಸಬ್ ಇನ್ಸ್ ಪೆಕ್ಟರ್ ಹಾಗೂ ಸುಬ್ಬಂದಿ ಕಾರು ತಡೆದು ದಂಡ ವಿಧಿಸಿದ್ದಾರೆ. ಕರ್ತವ್ಯದಲ್ಲಿ ಇಲ್ಲದ ವೇಳೆ ಪೊಲೀಸ್ ನಾಮಫಲಕವನ್ನು ಅಳವಡಿಸಿಕೊಳ್ಳುವುದು ಕಾನೂನು ಉಲ್ಲಂಘನೆಯಾಗಿದ್ದು, ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿ, ನಾಮಫಲಕ ತೆರವು ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular