ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಯ ಜೊತೆಗೆ ದಟ್ಟ ಮಂಜು ಕವಿದ ವಾತಾವರಣವಿದ್ದು, ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟಗಳಲ್ಲಿ ಭಾರಿ ವ್ಯತ್ಯಯವುಂಟಾಗಿದೆ.
ದೆಹಲಿಯಲ್ಲಿ 700ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಕೆಲವು ಅಂತರಾಷ್ಟ್ರೀಯ ವಿಮಾನಗಳ ಹಾಅರಾಡಲ್ಲಿಯೂ ವ್ಯತ್ಯಯವಾಗಿದ್ದು, ವಿಳಂಬವಾಗಿ ಹಾರಾಟ ನಡೆಸಲಿವೆ.
ರಾಷ್ಟ್ರ ರಾಜಧಾನಿ ದೆಹಲಿ ಸಂಪರ್ಕಿಸುವ ರಸ್ತೆಗಳಲ್ಲಿಯೂ ಸಮಸ್ಯೆಯಾಗಿದೆ. ರಸ್ತೆ ಮಾರ್ಗಗಳು ಗೋಚರಿಸದಷ್ಟು ದಟ್ಟ ಮಂಜು ಹಾಗೂ ವಾಯುಮಾನ್ಯದಿಂದ ತುಂಬಿದ್ದು, ವಾಹನ ಸಂಚಾರಕ್ಕೂ ತೊಂದರೆಯಾಗಿದೆ.
ದೆಹಲಿಯಲ್ಲಿ ತಾಪಮಾನ ತೀವ್ರ ಕುಸಿತವಾಗಿದ್ದು, 8 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ. ಗಾಅಳಿಯ ಗುಣಮಟ್ಟ 420ಕ್ಕೆ ತಲುಪಿದೆ.

