ನವದೆಹಲಿ: ದೆಹಲಿಯ ಲಜಪತ್ ನಗರದ ಜ್ಯುವೆಲ್ಲರಿ ಶೋರೂಂನಲ್ಲಿ ಸಿಬ್ಬಂದಿಯೇ ಚಿನ್ನಾಭರಣ ಕಳವು ಮಾಡಿ ಸಿಕ್ಕಿಬಿದ್ದಿದ್ದಾರೆ.
2.5 ಕೆಜಿ ಚಿನ್ನಾಭರಣವನ್ನು ಕಳವು ಮಾಡಿದ ಇಬ್ಬರು ಸಿಬ್ಬಂದಿಗಳಾದ ಜ್ಞಾನ್ ಪ್ರಕಾಶ್ ಮತ್ತು ಸರಿತಾ ಪಾಠಕ್ ಅವರನ್ನು ಬಂಧಿಸಲಾಗಿದೆ. ಇವರಿಂದ 2.5 ಕೆಜಿ ಚಿನ್ನ ಹಾಗೂ 10 ಲಕ್ಷ ರೂ.ಗೂ ಅಧಿಕ ನಗದು ವಶಪಡಿಸಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳ ವಿರುದ್ಧ ಲಜಪತ್ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
Delhi | 2 staff members, namely Gyan Prakash & Sarita Pathak, of a Jewellery showroom in Lajpat Nagar were arrested after they stole 2.5 kg gold from the jewellery showroom. 2.5 kg gold and cash worth over Rs 10 lakhs recovered from them. Case registered against both the accused…
— ANI (@ANI) July 4, 2023


