HomeIndiaದೆಹಲಿಯಲ್ಲಿ ಬೆಚ್ಚಿಬೀಳಿಸೋ ಕೃತ್ಯ; ಬಾಲಕಿ ಮೇಲೆ ಗ್ಯಾಂಗ್ ರೇಪ್, ಕೊಲೆ – ಮೂವರು ಅಪ್ರಾಪ್ತರು ಸೇರಿ...

ದೆಹಲಿಯಲ್ಲಿ ಬೆಚ್ಚಿಬೀಳಿಸೋ ಕೃತ್ಯ; ಬಾಲಕಿ ಮೇಲೆ ಗ್ಯಾಂಗ್ ರೇಪ್, ಕೊಲೆ – ಮೂವರು ಅಪ್ರಾಪ್ತರು ಸೇರಿ ನಾಲ್ವರು ಅರೆಸ್ಟ್!

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಉತ್ತರ ದೆಹಲಿಯ ಸ್ವರೂಪ್ ನಗರದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ

ಉತ್ತರ ದೆಹಲಿಯ ಸ್ವರೂಪ್ ನಗರದಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಇರಿದು ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.. ಬಾಲಕಿಯ ಮೃತದೇಹವನ್ನು ಎಲೆಗಳು ಹಾಗೂ ಮಣ್ಣಿನಡಿ ಮುಚ್ಚಿಟ್ಟು ಆರೋಪಿಗಳು ಪರಾರಿಯಾಗಿದ್ದರು ಎನ್ನಲಾಗಿದೆ.

ಮೃತ ಬಾಲಕಿಯ ಮೃತದೇಹದಲ್ಲಿ ಹಲವು ಇರಿತದ ಗಾಯಗಳು ಪತ್ತೆಯಾಗಿದ್ದು, ಆರೋಪಿಗಳು ಆಕೆಯ ದೇಹವನ್ನು ಎಲೆಗಳು ಹಾಗೂ ಮಣ್ಣಿನಡಿ ಮುಚ್ಚಿಟ್ಟು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೆಹಲಿ ಪೊಲೀಸರು ಗುರುವಾರ ಈ ಕುರಿತು ಮಾಹಿತಿ ನೀಡಿದ್ದು, ಶಿವಂ ಗಣೇಶ್ (19) ಎಂಬಾತನನ್ನು ಬಂಧಿಸಲಾಗಿದ್ದು, 17 ಮತ್ತು 16 ವರ್ಷದ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಎರಡು ಚಾಕುಗಳು ಹಾಗೂ ಆರೋಪಿಗಳು ಕೃತ್ಯದ ವೇಳೆ ಧರಿಸಿದ್ದರೆನ್ನಲಾದ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ.

ಮೃತ ಬಾಲಕಿ ಶಾಲೆ ತೊರೆದಿದ್ದಳು. ಕುಟುಂಬಕ್ಕೆ ನೆರವಾಗಲು ಕೆಲಸ ಹುಡುಕುತ್ತಿದ್ದ ಆಕೆ, ಸ್ವಂತವಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಆಕೆಯ ದೇಹದಲ್ಲಿ ಹಲವು ಕಡೆ ಇರಿತದ ಗಾಯಗಳು ಪತ್ತೆಯಾಗಿವೆ.

ವರದಿ ಪ್ರಕಾರ, ಬಾಲಕಿಗೆ ಆರೋಪಿಗಳಲ್ಲಿ ಒಬ್ಬನಾದ 17 ವರ್ಷದ ಬಾಲಕನ ಪರಿಚಯವಿತ್ತು. ಸೆಪ್ಟೆಂಬರ್ 10ರ ಸಂಜೆ ಆತನನ್ನು ಭೇಟಿಯಾಗಲು ಆಕೆ ತೆರಳಿದ್ದಳು ಎನ್ನಲಾಗಿದೆ.

ಪೊಲೀಸರ ಹೇಳಿಕೆಯ ಪ್ರಕಾರ, ಮೊದಲು ಆ 17 ವರ್ಷದ ಬಾಲಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಆಕೆ ಬೆದರಿಕೆ ಹಾಕಿದಾಗ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದು, ಅವರೂ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿಗಳು ಕೃತ್ಯದ ವೇಳೆ ಮದ್ಯದ ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ರಕ್ತದ ಮಾದರಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅತ್ಯಾಚಾರದ ಬಳಿಕ ಸೆಪ್ಟೆಂಬರ್ 11ರ ಮುಂಜಾನೆ ಆರೋಪಿಗಳು ಬಾಲಕಿಯನ್ನು ಹೊಲವೊಂದಕ್ಕೆ ಕರೆದೊಯ್ದು, ಆಕೆಗೆ ಆರು ಬಾರಿಗಿಂತಲೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ನಂತರ ಮೃತದೇಹವನ್ನು ಎಲೆಗಳು ಮತ್ತು ಮಣ್ಣಿನಡಿ ಮುಚ್ಚಿಟ್ಟು ಟೆಂಪೋದಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ವೇಳೆ ಟೆಂಪೋದಲ್ಲಿದ್ದ ನಾಲ್ವರು ಯುವಕರ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿವೆ. ಅವರನ್ನು ಗುರುತಿಸಲಾಗಿದ್ದರೂ, ಅವರು ತಮ್ಮ ಮನೆಗಳಿಂದ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಡಿಸಿಪಿ ಶೋಭಿತ್ ಸಕ್ಸೇನಾ ಮಾತನಾಡಿ, ಲಭ್ಯವಾದ ಸುಳಿವುಗಳ ಆಧಾರದ ಮೇಲೆ ಮಂಗಳವಾರ-ಬುಧವಾರ ಮಧ್ಯರಾತ್ರಿ ಇಡೀ ರಾತ್ರಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಸ್ವರೂಪ್ ನಗರದ ಖಡ್ಡಾ ಕಾಲೋನಿಯಲ್ಲಿ ಟೆಂಪೋವನ್ನು ಪತ್ತೆಹಚ್ಚಲಾಯಿತು. ಅದರ ಚಾಲಕನನ್ನು ಗುರುತಿಸಿ ವಿಚಾರಣೆ ನಡೆಸಲಾಯಿತು. ಮುಂದಿನ ತನಿಖೆಯಿಂದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular