HomeInternationalಮೊರಾಕ್ಕೊ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,000 ಕ್ಕೆ ಏರಿಕೆ!

ಮೊರಾಕ್ಕೊ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,000 ಕ್ಕೆ ಏರಿಕೆ!

ಮೊರಾಕ್ಕೊ : ಮೊರಾಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,962 ಕ್ಕೆ ಏರಿಕೆಯಾಗಿದ್ದು. ಎರಡೂವರೆ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಶುಕ್ರವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪದಿಂದ ಮೊರಾಕೊದ ಹಲವಾರು ನಗರಗಳು ನಾಶವಾಗಿವೆ. ಹಲವು ಕಟ್ಟಡಗಳು ಕುಸಿದಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಕಳೆದ 60 ವರ್ಷಗಳಲ್ಲಿ ಇಂತಹ ದುರಂತ ಸಂಭವಿಸಿಲ್ಲ. 1960 ರಲ್ಲಿ, ದೇಶದ ಪಶ್ಚಿಮ ಭಾಗದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಕನಿಷ್ಠ 12,000 ಜನರು ಪ್ರಾಣ ಕಳೆದುಕೊಂಡರು. ರಸ್ತೆಗಳಲ್ಲಿ ಬೃಹತ್ ಬಂಡೆಗಳು ಬಿದ್ದಿರುವುದರಿಂದ ಅವಶೇಷಗಳನ್ನು ತೆಗೆದುಹಾಕಲು ಅಗತ್ಯವಾದ ಉಪಕರಣಗಳು ಇನ್ನೂ ಪೀಡಿತ ಪ್ರದೇಶಗಳನ್ನು ತಲುಪಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular