HomeKarnatakaBREAKING: ದಾವಣಗೆರೆ ಕೋಳಿ ಫಾರ್ಮ್ ನಲ್ಲಿ 830 ಕೋಳಿಗಳು ನಿಗೂಢ ಸಾವು

BREAKING: ದಾವಣಗೆರೆ ಕೋಳಿ ಫಾರ್ಮ್ ನಲ್ಲಿ 830 ಕೋಳಿಗಳು ನಿಗೂಢ ಸಾವು

ದಾವಣಗೆರೆ: ಕೋಳಿ ಫಾರ್ಮ್ ನಲ್ಲಿ 830 ಕೋಳಿಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಒಂದೇ ದಿನ 830 ಕೋಳಿಗಳು ಸಾವನ್ನಪ್ಪಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

ಪ್ರಕಾಶ್ ಹಾಗೂ ಅರ್ಜುನ್ ಎಂಬುವವರಿಗೆ ಸೇರಿದ ನಾಟಿ ಕೋಳಿ ಫಾರ್ಮ್ ನಲ್ಲಿ ಈ ಘಟನೆ ನಡೆದಿದೆ. ಕೋಳಿಗಳಿಗೆ ಯಾವುದೇ ರೀಯಿಯ ರೋಗ ಲಕ್ಷಗಳು ಇರಲಿಲ್ಲ. ಅವುಗಳಿಗೆ ಆಹಾರ ನೀಡುವಲ್ಲಿಯೂ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೆ ಬೆಳಗಾಗುವಷ್ಟರಲ್ಲಿ ಕೋಳಿಫಾರ್ಮ್ ನಲ್ಲಿದ್ದ ಕೋಳಿಗಳು ಸತ್ತು ಹೋಗಿವೆ. ಇದನ್ನು ಕಂಡು ಮಾಲೀಕರು ಆತಂಕಕ್ಕೊಳಗಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾರೋ ದುಷ್ಕರ್ಮಿಗಳು ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕೋಳಿಗಳ ಮಾದರಿ ಸಂಗ್ರಹಿಸಿ ಲ್ಯಾಬ್ ಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಕೋಳಿಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ. 830 ಕೋಳಿಗಳ ನಿಗೂಢ ಸಾವಿನಿಂದ ಮಾಲೀಕರಿಗೆ ಭಾರಿ ನಷ್ಟವುಂಟಾಗಿದ್ದು, ಪರಿಹಾರ ಕೊಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular