HomeKarnatakaಅಡಿಕೆ ತೋಟಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು: 1500ಕ್ಕೂ ಹೆಚ್ಚು ಅಡಿಕೆ ಗಿಡಗಳು ಸುಟ್ಟು ಕರಕಲು

ಅಡಿಕೆ ತೋಟಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು: 1500ಕ್ಕೂ ಹೆಚ್ಚು ಅಡಿಕೆ ಗಿಡಗಳು ಸುಟ್ಟು ಕರಕಲು

ದಾವಣಗೆರೆ: ದ್ವೇಷ, ಅಸೂಯೆಗೆ ಕಿದಿಗೇದಿಗಳು ಅಡಿಕೆ ತೋಟಕ್ಕೆ ಬೆಂಕಿ ಹಚ್ಚಿದ್ದು, ರೈತ ಕಷ್ಟಪಟ್ಟು ಬೆಳೆದ ಜೀವನಾಧಾರವಾಗಿದ್ದ ಅಡಿಕೆ ಮರಗಳೇ ಸುಟ್ಟು ಕರಕಲಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿಡಿಗೇದಿಗಳ ದುಷ್ಕೃತ್ಯಕ್ಕೆ 1500 ಅಡಿಕೆ ಗಿಡಗಳು, ಎರಡು ಲೋಡ್ ಮೆಕ್ಕೆಜೋಳದ ತೆನೆಗಳು ಕೂಡ ಸುಟ್ಟುಹೋಗಿವೆ.

ಓಬಳೇಶ್ ಎಂಬ ರೈತನಿಗೆ ಸೇರಿದ ಅಡಿಕೆ ಹಾಗೂ ಮೆಕ್ಕೆಜೋಳ ಬೆಳೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಸಾಲಮಾಡಿ ಅಡಿಕೆ ಗಿಡಗಳನ್ನು ನೆಟ್ಟಿದ್ದ ರೈತ ಇದನ್ನು ಕಂಡು ಅಘಾತಕ್ಕೀಡಾಗಿದ್ದಾರೆ. ಕಿಡಿಗೇಡಿಗಳನ್ನು ಪತ್ತೆಮಾಡಿ ಬಂಧಿಸುವಂತೆ ಗ್ರಾಮಸ್ಥರು ಪೊಲೀಸರುಗೆ ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಒಂದು ವರ್ಷದಲ್ಲಿ ಗ್ರಾಮದಲ್ಲಿ ಇದೇ ರೀಟಿ ನಾಲ್ಕೈದು ತೋಟಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular