HomeKarnatakaBIG NEWS: ಜೈಲಿನ ಗೋಡೆ ಜಿಗಿದು ಎಸ್ಕೇಪ್ ಆದ ಅತ್ಯಾಚಾರ ಪ್ರಕರಣದ ಆರೋಪಿ

BIG NEWS: ಜೈಲಿನ ಗೋಡೆ ಜಿಗಿದು ಎಸ್ಕೇಪ್ ಆದ ಅತ್ಯಾಚಾರ ಪ್ರಕರಣದ ಆರೋಪಿ

ದಾವಣಗೆರೆ: ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

23 ವರ್ಷದ ವಸಂತ್ ಜೈಲಿನಿಂದ ತಪ್ಪಿಸಿಕೊಂಡಿರುವ ಆರೋಪಿ. ದಾವಣಗೆರೆ ಉಪಕಾರಾಗೃಹದ ಗೋಡೆ ಮೇಲಿನಿಂದ ಜಿಗಿದ ಆರೋಪಿ ಬಳಿಕ ಸುತ್ತಮುತ್ತ ನೋಡಿಕೊಂಡು ಯಾರೂ ಇಲ್ಲದಿರುವುದನ್ನು ಕಂಡು ಕುಂಟುತ್ತಲೇ ರಸ್ತೆದಾಟಿ ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಜೈಲಿನಿಂದ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಜೈಲಿನ ಗೋಡೆ ಮೇಲಿಂದ ಜಿಗಿದು ಪರಾರಿಯಾಗಿರುವುದು ಜೈಲು ಅಧಿಕಾರಿಗಳು, ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular