HomeLatest Newsಸಂಜೆಯ ಚಹಾ ಜೊತೆಗೆ ಪರ್ಫೆಕ್ಟ್ ಸ್ನ್ಯಾಕ್: 10 ನಿಮಿಷದಲ್ಲಿ ಮಾಡಿ ದಾವಣಗೆರೆ ಶೈಲಿಯ ನರ್ಗೀಸ್ ಮಂಡಕ್ಕಿ

ಸಂಜೆಯ ಚಹಾ ಜೊತೆಗೆ ಪರ್ಫೆಕ್ಟ್ ಸ್ನ್ಯಾಕ್: 10 ನಿಮಿಷದಲ್ಲಿ ಮಾಡಿ ದಾವಣಗೆರೆ ಶೈಲಿಯ ನರ್ಗೀಸ್ ಮಂಡಕ್ಕಿ

ಕರ್ನಾಟಕದ ಆಹಾರ ಸಂಸ್ಕೃತಿಯಲ್ಲಿ ದಾವಣಗೆರೆ ಬೆಣ್ಣೆ ದೋಸೆಗೆ ಎಷ್ಟು ಹೆಸರಿದೆಯೋ, ಅಷ್ಟೇ ಜನಪ್ರಿಯತೆ ಅಲ್ಲಿನ ನರ್ಗೀಸ್ ಮಂಡಕ್ಕಿಗೂ ಇದೆ. ಸಂಜೆಯ ತಂಪಾದ ವಾತಾವರಣದಲ್ಲಿ ಕಬ್ರಿಸಿ ಸವಿಯಲು ದಾವಣಗೆರೆ ಶೈಲಿಯ ನರ್ಗೀಸ್ ಮಂಡಕ್ಕಿ ಸೂಪರ್ ಕಾಂಬಿನೇಷನ್. ಚಹಾ ಅಥವಾ ಕಾಫಿಯೊಂದಿಗೆ ಈ ವಿಶಿಷ್ಟ ತಿಂಡಿಯನ್ನು ಸವಿಯುವುದೇ ಒಂದು ಸಂಭ್ರಮ.

ಮನೆಯಲ್ಲಿಯೇ ದಾವಣಗೆರೆ ಶೈಲಿಯ ನರ್ಗೀಸ್ ಮಂಡಕ್ಕಿ ತಯಾರಿಸುವ ಸರಳ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಮಂಡಕ್ಕಿ (ಪುರಿ)

  • ಕಡಲೆಕಾಯಿ ಎಣ್ಣೆ

  • ಸಾಸಿವೆ, ಜೀರಿಗೆ

  • ಹಿಂಗ್ (ಇಂಗು)

  • ಕರಿಬೇವು

  • ಹಸಿಮೆಣಸಿನಕಾಯಿ

  • ಬೆಳ್ಳುಳ್ಳಿ (ಜ್ಜಜ್ಜಿದ್ದು)

  • ಹುರಿದ ಕಡಲೆಪಪ್ಪು (ಪುಟಾಣಿ ಪುಡಿ)

  • ಅರಿಶಿನ

  • ಖಾರದ ಪುಡಿ

  • ರುಚಿಗೆ ತಕ್ಕಷ್ಟು ಉಪ್ಪು

  • ಹುರಿದ ಶೇಂಗಾ ಬೀಜ ಮತ್ತು ಖಾರಾ ಸೇವಿಗೆ (ಮಿಶ್ರಣಕ್ಕೆ)

ತಯಾರಿಸುವ ವಿಧಾನ: ಮೊದಲು ಬಾಣಲೆಯಲ್ಲಿ ಕಡಲೆಕಾಯಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ.

ನಂತರ ಜಜ್ಜಿದ ಬೆಳ್ಳುಳ್ಳಿ ಹಾಗೂ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿಯಿರಿ.

ಇದಕ್ಕೆ ಅರಿಶಿನ, ಖಾರದ ಪುಡಿ, ಉಪ್ಪು ಮತ್ತು ಸಣ್ಣಗೆ ಮಾಡಿದ ಪುಟಾಣಿ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಮಿಕ್ಸ್ ಮಾಡಿ. ಒಗ್ಗರಣೆ ಸೀದುಹೋಗದಂತೆ ಎಚ್ಚರ ವಹಿಸಿ.

ಈಗ ಈ ಬಿಸಿ ಒಗ್ಗರಣೆಯನ್ನು ಒಂದು ದೊಡ್ಡ ಪಾತ್ರೆಯಲ್ಲಿರುವ ಮಂಡಕ್ಕಿಗೆ ಹಾಕಿ ಚೆನ್ನಾಗಿ ಬೆರೆಸಿ. ಕೊನೆಯಲ್ಲಿ ಹುರಿದ ಶೇಂಗಾ ಮತ್ತು ಖಾರಾ ಸೇವಿಯನ್ನು ಸೇರಿಸಿ ಮಿಕ್ಸ್ ಮಾಡಿದರೆ ಗರಿಗರಿಯಾದ ದಾವಣಗೆರೆ ಸ್ಪೆಷಲ್ ನರ್ಗೀಸ್ ಮಂಡಕ್ಕಿ ಸಿದ್ಧವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular