HomeLive NewsBREAKING: ದಾವಣಗೆರೆಯಲ್ಲಿ ಬಾಲಕನಿಗೆ ಚಿತ್ರಹಿಂಸೆ ಪ್ರಕರಣ: 10ಜನರ ವಿರುದ್ಧ FIR ದಾಖಲು; ಓರ್ವ ಪೊಲೀಸ್ ವಶಕ್ಕೆ

BREAKING: ದಾವಣಗೆರೆಯಲ್ಲಿ ಬಾಲಕನಿಗೆ ಚಿತ್ರಹಿಂಸೆ ಪ್ರಕರಣ: 10ಜನರ ವಿರುದ್ಧ FIR ದಾಖಲು; ಓರ್ವ ಪೊಲೀಸ್ ವಶಕ್ಕೆ

ದಾವಣಗೆರೆ: ದವಣಗೆರೆಯಲ್ಲಿ ಬಾಲಕನನ್ನು ಮರಕ್ಕೆ ಕಟ್ಟಿಹಾಕಿ ಮರ್ಮಾಂಗಕ್ಕೆ ಕೆಂಪಿರುವೆ ಬಿಟ್ಟು ಚಿತ್ರ ಹಿಂಸೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ದಾವಣಗೆರೆಯ ಅಸ್ತಾಪನಹಳ್ಳಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಬಾಲಕನೊಬ್ಬನ ಮೇಲೆ ಕಳ್ಳತನ ಆರೋಪದಲ್ಲಿ ಅದೇ ಜನಾಂಗದ ಯುವಕರ ಗುಂಪು ಬಾಲಕನನ್ನು ಮನಬಂದಂತೆ ಥಳಿಸಿ, ಮರಕ್ಕೆ ಕಟ್ಟಿಹಾಕಿ ಮರ್ಮಾಅಂಗಕ್ಕೆ ಕೆಂಪಿರುವೆ ಬಿಟ್ಟು ಚಿತ್ರಹಿಂಸೆ ನೀಡಿ ವಿಕೃತಿ ಮೆರೆದಿತ್ತು. ಬಾಲಕನ ಮೇಲಿನ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಚನ್ನಗಿರಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕನ ಮೇಲೆ ಹಲ್ಲೆ ನಡೆಸಿದ ಹತ್ತು ಜನರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದು, ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular