HomeKarnatakaBIG NEWS : ವೃದ್ಧಾಪ್ಯದಲ್ಲಿ ತಾಯಿ ಆರೈಕೆ ಮಗಳ ಜವಾಬ್ದಾರಿ : ಹೈಕೋರ್ಟ್ ಮಹತ್ವದ ತೀರ್ಪು

BIG NEWS : ವೃದ್ಧಾಪ್ಯದಲ್ಲಿ ತಾಯಿ ಆರೈಕೆ ಮಗಳ ಜವಾಬ್ದಾರಿ : ಹೈಕೋರ್ಟ್ ಮಹತ್ವದ ತೀರ್ಪು

ವೃದ್ಧಾಪ್ಯದಲ್ಲಿ ಹೆತ್ತವರನ್ನು ಸಾಕುವುದು ಮಕ್ಕಳ ಕೇವಲ ಆಯ್ಕೆಯಲ್ಲ, ಅದು ಅವರ ನೈತಿಕ ಮತ್ತು ಕಾನೂನಾತ್ಮಕ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತನ್ನನ್ನು ಕಡೆಗಣಿಸಿದ ಮಗಳ ಹೆಸರಿಗೆ ನೀಡಿದ್ದ ಆಸ್ತಿಯನ್ನು ವಾಪಸ್ ಪಡೆಯಲು ವೃದ್ಧ ತಾಯಿಗೆ ಹಕ್ಕಿದೆ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಆಸ್ತಿ ವರ್ಗಾವಣೆ ರದ್ದುಪಡಿಸಿದ್ದ ಕೆಳಹಂತದ ನ್ಯಾಯಮಂಡಳಿಯ ಆದೇಶವನ್ನು ಎತ್ತಿಹಿಡಿಯುವ ಮೂಲಕ ಹಿರಿಯ ನಾಗರಿಕರ ರಕ್ಷಣೆಗೆ ಧಾವಿಸಿದೆ.

ಪ್ರಕರಣದ ವಿವರ:

ಸಂತ್ರಸ್ತ ಮಹಿಳೆ ಸುಮಾರು 62 ವರ್ಷದ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕಿ ಜಿ. ಹೇಮಾ. ಇವರು ತಮ್ಮ ಸ್ವಂತ ಗಳಿಕೆಯಿಂದ ಸಂಪಾದಿಸಿದ ಆಸ್ತಿಯನ್ನು ವೃದ್ಧಾಪ್ಯದಲ್ಲಿ ಮಕ್ಕಳು ಆಸರೆಯಾಗುತ್ತಾರೆ ಮತ್ತು ಆಸ್ತಿಯ ಬಾಡಿಗೆಯಿಂದ ಜೀವನ ಸಾಗುತ್ತದೆ ಎಂಬ ನಂಬಿಕೆಯಿಂದ ಮಗಳು ಆರ್. ಪವಿತ್ರಾ ಮತ್ತು ಮಗ ಆರ್. ವೇಣುಗೋಪಾಲ್ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು.

ಪ್ರಕರಣದ ವಿವರಗಳ ಪ್ರಕಾರ, ನಿವೃತ್ತ ಶಿಕ್ಷಕಿ ಜಿ. ಹೇಮಾ ಅವರು ತಮ್ಮ ಸ್ವಂತ ಗಳಿಕೆಯ ಆಸ್ತಿಯನ್ನು ವೃದ್ಧಾಪ್ಯದಲ್ಲಿ ಮಕ್ಕಳು ತಮಗೆ ಆಸರೆಯಾಗುತ್ತಾರೆ ಎಂಬ ನಂಬಿಕೆಯಿಂದ ಮಗಳು ಪವಿತ್ರಾ ಮತ್ತು ಮಗ ವೇಣುಗೋಪಾಲ್ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು. ಆದರೆ, ಆಸ್ತಿ ಕೈ ಸೇರಿದ ಬೆನ್ನಲ್ಲೇ ಮಕ್ಕಳಿಬ್ಬರೂ ಮನೆಯ ಬಾಡಿಗೆ ವಸೂಲಿ ಮಾಡಲು ಮುಂದಾಗಿದ್ದರಲ್ಲದೆ, ತಾಯಿಗೆ ಕನಿಷ್ಠ ಸೌಲಭ್ಯಗಳನ್ನು ನೀಡಲು ನಿರಾಕರಿಸಿದ್ದರು. ಮಗಳು ಸ್ವಂತ ಮನೆಯಲ್ಲಿದ್ದರೂ, ತಾಯಿ ಮಾತ್ರ ಬಾಡಿಗೆ ಮನೆಯಲ್ಲಿ ಅಸಹಾಯಕರಾಗಿ ವಾಸಿಸುವಂತಾಗಿತ್ತು. ಈ ಅಮಾನವೀಯ ನಡೆಯಿಂದ ಬೇಸತ್ತ ಹೇಮಾ ಅವರು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯಡಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ ಮತ್ತು ಉಪವಿಭಾಗಾಧಿಕಾರಿಗಳು, ತಾಯಿ ನೀಡಿದ್ದ ಆಸ್ತಿ ನೋಂದಣಿಯನ್ನು ರದ್ದುಗೊಳಿಸಿ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಮಗಳು ಪವಿತ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠವು, ಮಗಳ ನಡೆಯನ್ನು ತೀವ್ರವಾಗಿ ಖಂಡಿಸಿತು. ದಾನಪತ್ರದಲ್ಲಿ “ತಾಯಿಯನ್ನು ನೋಡಿಕೊಳ್ಳಬೇಕು” ಎಂದು ಲಿಖಿತವಾಗಿ ಬರೆಯದಿದ್ದರೂ, ಹೆತ್ತವರು ಆಸ್ತಿ ನೀಡುವ ಹಿಂದೆ ಮಕ್ಕಳ ಮೇಲಿನ ಅಂಧವಾದ ನಂಬಿಕೆ ಇರುತ್ತದೆ ಮತ್ತು ಆ ನಂಬಿಕೆಯನ್ನು ಕಾನೂನು ಎತ್ತಿಹಿಡಿಯುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಅಂತಿಮವಾಗಿ, ಕಷ್ಟಕಾಲದಲ್ಲಿ ತಾಯಿಯನ್ನು ಕಡೆಗಣಿಸುವುದು ಮಗಳ ಬೇಜವಾಬ್ದಾರಿತನ ಎಂದು ಕಿಡಿಕಾರಿದ ನ್ಯಾಯಾಲಯ, ದಾನಪತ್ರ ರದ್ದುಗೊಳಿಸಿ ಆಸ್ತಿಯನ್ನು ಪುನಃ ತಾಯಿಯ ಸ್ವಾಧೀನಕ್ಕೆ ನೀಡುವುದು ಸಮರ್ಥನೀಯ ಎಂದು ಘೋಷಿಸಿತು. ಹಿರಿಯ ನಾಗರಿಕರ ಪೋಷಣೆ ಮತ್ತು ರಕ್ಷಣೆ ಮಾಡುವುದು ಮಕ್ಕಳ ಮೂಲಭೂತ ಕರ್ತವ್ಯ ಎಂದು ಈ ಮೂಲಕ ಹೈಕೋರ್ಟ್ ಮತ್ತೊಮ್ಮೆ ಸಾಬೀತುಪಡಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular