HomeCrimeಪ್ರಿಯಕರನ ಜೊತೆಗಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಯುವತಿ; ಗೆಳೆಯನ ಜೊತೆ ಸೇರಿ ತಾಯಿಯ ಹತ್ಯೆ

ಪ್ರಿಯಕರನ ಜೊತೆಗಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಯುವತಿ; ಗೆಳೆಯನ ಜೊತೆ ಸೇರಿ ತಾಯಿಯ ಹತ್ಯೆ

ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಅಮ್ಮನ ಹತ್ಯೆ ಮಾಡಿದ ಆರೋಪದಲ್ಲಿ ಮಗಳು ಹಾಗೂ ಆಕೆ ಪ್ರಿಯಕರನನ್ನು ಬಂಧಿಸಲಾಗಿದೆ. ಇಬ್ಬರೂ ಒಟ್ಟಿಗಿರುವಾಗ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದರು. ತಾಯಿ ಇದಕ್ಕೆ ಕೋಪ ವ್ಯಕ್ತಪಡಿಸುತ್ತಿದ್ದಂತೆ ಮಗಳು ತನ್ನ ಪ್ರಿಯಕರನ ಜೊತೆ ಸೇರಿ ಅಮ್ಮನ ಕತ್ತು ಹಿಸುಕಿದ್ದಳು.

ಬಲ್ಲನ್ ಗ್ರಾಮದಲ್ಲಿ ವಾಸವಿದ್ದ 45 ವರ್ಷದ ರಾಜುಲಿಯಾ  ಅವರನ್ನು ಜುಲೈ 29 ರಂದು ಕೊಲೆ ಮಾಡಲಾಗಿತ್ತು. ಹತ್ಯೆಯಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ತಲೆ ಮರೆಸಿಕೊಂಡಿದ್ದಾನೆ. ರಾಜುಲಿಯಾ ಅವರ ದೇಹ ಕೊಳದ ಬಳಿ ಪತ್ತೆಯಾಗಿತ್ತು.

ಸೋಮವಾರ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿದ್ದ  ಮಗಳು ನೀತು ಮತ್ತು ಆಕೆಯ ಪ್ರಿಯಕರ ಅತುಲ್ ಆರ್ಕ್ ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ದದುವಾಗಾಗಿ ಬಲೆ ಬೀಸಿದ್ದಾರೆ. ಜುಲೈ 29 ರ ರಾತ್ರಿ ಈ ಹತ್ಯೆ ನಡೆದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular