HomeLatest NewsBIG NEWS: ದಸರಾ ನಾಡ ಹಬ್ಬ; ಇದು ಧರ್ಮಾತೀತ, ಜಾತ್ಯಾತೀತವಾದ ಹಬ್ಬ: ಅದಕ್ಕೆ ಬಾನು ಮುಷ್ತಾಕ್...

BIG NEWS: ದಸರಾ ನಾಡ ಹಬ್ಬ; ಇದು ಧರ್ಮಾತೀತ, ಜಾತ್ಯಾತೀತವಾದ ಹಬ್ಬ: ಅದಕ್ಕೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದೇವೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ದಸರಾ ನಾಡ ಹಬ್ಬ ಹಾಗಾಗಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಮುಖ್ಯಮಂತ್ರಿಬ್ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ದಸರಾ ನಾಡ ಹಬ್ಬವಾಗಿರುವುದರಿಂದ ಇಂಥವರೇ ಉದ್ಘಾಟನೆ ಮಾಡಬೇಕು ಅಂತೇನೂ ಇಲ್ಲ. ಎಲ್ಲರೂ ಸೇರಿ ದಸರಾವನ್ನು ಆಚರಣೆ ಮಾಡಬೇಕು ನಾಡ ಹಬ್ಬ ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೈದರಾಲಿ, ಟಿಪ್ಪು ದಸರಾ ಆಚರಣೆ ಮಾಡಿರಲಿಲ್ಲವೇ? ಮಿರ್ಜಾ ಇಸ್ಮಾಯಿಲ್ ದಿವಾನರಾಗಿರಲಿಲ್ಲವೇ? ಇದು ಧರ್ಮಾತೀತ ಹಾಗೂ ಜಾತ್ಯಾತೀತವಾದ ಹಬ್ಬ. ದಸರಾ ಸಾಂಸ್ಕೃತಿಕವಾಗಿ ಮಾಡುವ ನಾಡಹಬ್ಬ. ಹಾಗಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರನ್ನು ದಸರಾ ಉದ್ಘಾತನೆಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular